ನವೀಕೃತ ಶಾಲಾ ಕಟ್ಟಡಗಳ ಉದ್ಘಾಟನೆ, ಅಭಿನಂದನ ಸಮಾರಂಭ ಮತ್ತು ಶಾಲಾ ವಾರ್ಷಿಕೋತ್ಸವ ಪ್ರಯುಕ್ತ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಾಳೆ ಮೂಲೆ ಸ್ಥಾಪಕ ರೂವಾರಿ ಶ್ರೀ ಸಂಜೀವ ರೈ ಚಿಲ್ಮೆತ್ತಾರು ಅವರಿಗೆ ಗೌರವಾರ್ಪಣೆ ಕಾರ್ಯಕ್ರಮ ಕಾಟಕುಕ್ಕೆ ಕೆಂಗಣಾಜೆ ನಿವಾಸದಲ್ಲಿ ನಡೆಯಿತು.
ಈ ಕಾರ್ಯಕ್ರಮ ಪ್ರಾಸ್ತಾವಿಕಗೈದು ಮಾತನಾಡಿದ ಶಾಲಾ ಎಸ್ ಎಸ್ ಜಿ ಅಧ್ಯಕ್ಷ ಬಟ್ಯ ಮಾಸ್ಟರ್, ಸಂಜೀವ ರೈ ಅವರಿ ಶಾಲೆಯ ಸ್ಥಾಪನೆಗಾಗಿ ಹಗಲಿರುಳು ದುಡಿದು ಈ ಕುಗ್ರಾಮದಲ್ಲಿ ಬಡವರಿಗೆ ಅಕ್ಷರದ ಅರಿವಿಕೆಯನ್ನು ಬಿತ್ತುವಲ್ಲಿ ಯಶಸ್ವಿಯಾದರು. ಮಾತ್ರವಲ್ಲದೆ ಸಾಮಾಜಿಕ ಧಾರ್ಮಿಕ ವಿವಿಧ ಕ್ಷೇತ್ರದಲ್ಲಿ ಅಪಾರ ಸಾಧನೆಯನ್ನು ಮಾಡಿ ನಾಡಿನ ಜನತೆಗೆ ಪ್ರೀತಿ ಪಾತ್ರರಾದರು ಎಂದರು.

ಫಲ ಪುಷ್ಪ ನೆನಪಿನ ಸ್ಮರಣಿಕೆಯೊಂದಿಗೆ ಗೌರವಾರ್ಪಣೆ ಮಾಡಲಾಯಿತು. ಈ ವೇಳೆ ಸಂಜೀವ ರೈ ಅವ ಪತ್ನಿ ಲಲಿತಾ ರೈ ಪುತ್ರ ಸುನಿಲ್ ಕುಮಾರ್ ಮತ್ತು ಸೊಸೆ ಸಹನ ಜೊತೆಗಿದ್ದರು.
ಶಾಲಾ ಎಸ್‌ಎಸ್‌ಜಿ ಉಪಾಧ್ಯಕ್ಷ ಮಾಲಿಂಗ ಕೆ ರವರು ಮಾತನಾಡಿ, ನಮ್ಮ ಊರಿನ ಅಭಿವೃದ್ಧಿಗೆ ಇಂತಹ ಮಹನೀಯರ ಕೊಡುಗೆ ಅಪಾರ ಎಂದು ಶ್ಲಾಘಿಸಿದರು.
ಸನ್ಮಾನಿತರು ತಾವು ಶಾಲೆಯ ಆರಂಭಕ್ಕಾಗಿ ಪಟ್ಟ ಪರಿಶ್ರಮವನ್ನು ನಗುಮುಖದಿಂದ ವಿಶ್ಲೇಷಿಸಿ ಇನ್ನು ಮುಂದೆ ಈ ಶಾಲೆಯು ಉತ್ತಮ ರೀತಿಯ ಅಭಿವೃದ್ಧಿಯತ್ತ ಸಾಗಲಿ ಎಂದು ಹರಸಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಪಿಟಿಎ ಅಧ್ಯಕ್ಷ ರಾಜೇಶ್ ಬಿ, ಶಾಲಾ ಎಸ್ ಎಂ ಸಿ ಅಧ್ಯಕ್ಷ ಬಾಲಕೃಷ್ಣ ಭಟ್, ಸಿ ಆರ್ ಸಿ ಕೋರ್ಡಿನೆಟರ್ ಸುರೇಶ್, ಶಾಲಾ ಅಧ್ಯಾಪಕರು ಮತ್ತು ಕಾಟುಕುಕ್ಕೆ ಶಾಲಾ ಅಧ್ಯಾಪಕ ಚಂದ್ರಹಾಸ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ರಾಜೇಶ್ ಬಜಕೂಡ್ಲು ಶಾಲಾ ದಾಖಲೆಯಲ್ಲಿ ನಿಮ್ಮ ಹೆಸರಿದ್ದು ಶತಶತಮಾನಗಳ ವರೆಗೂ ಶಾಶ್ವತವಾಗಿ ಉಳಿಯಲಿದೆ ಎಂದು ನುಡಿದು ಧನ್ಯವಾದ ಅರ್ಪಿಸಿದರು.