ಈಡನ್ ಗಾರ್ಡನ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಹೈವೋಲ್ಟೇಜ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಟೀಮ್ಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಬರೋಬ್ಬರಿ 262 ರನ್ಗಳ ಬಿಗ್ ಟಾರ್ಗೆಟ್ ನೀಡಿದ್ದು ಮಾತ್ರವಲ್ಲದೆ ಮತ್ತೊಂದು ದಾಖಲೆಗೂ ಸಾಕ್ಷಿಯಾಗಿದೆ ಕ್ರೀಡಾಂಗಣ.
ಕೆಕೆಆರ್ ನೀಡಿದ ಬೃಹತ್ ಗುರಿ ಬೆನ್ನತ್ತಿ ಪಂಜಾಬ್ ಕಿಂಗ್ಸ್ ಪರ ಓಪನರ್ ಆಗಿ ಬಂದ ಬೇರ್‌ಸ್ಟೋ (Jonny Bairstow) ಭರ್ಜರಿ ಬ್ಯಾಟಿಂಗ್ ಮಾಡಿದರು. ಇನ್ನಿಂಗ್ಸ್ ಉದ್ಧಕ್ಕೂ ಕೆಕೆಆರ್ ಬೌಲರ್ಗಳ ಬೆಂಡೆತ್ತಿದರು.
ಇನ್ನು, ಕೇವಲ 45 ಬಾಲ್ನಲ್ಲಿ ಸಿಡಿಲಬ್ಬರದ ಶತಕ ಸಿಡಿಸಿದ ಕೀರ್ತಿ ಬೇರ್‌ಸ್ಟೋ ಗಿಟ್ಟಿಸಿಕೊಂಡರು. ಅದರಲ್ಲೂ ಬರೋಬ್ಬರಿ 8 ಸಿಕ್ಸರ್, 8 ಭರ್ಜರಿ ಫೋರ್ನೊಂದಿಗೆ 100 ರನ್ ಸಿಡಿಸಿ ದಾಖಲೆ ಬರೆದರು. ಇವರ ಸ್ಟ್ರೈಕ್ ರೇಟ್ ಬರೋಬ್ಬರಿ 220ಕ್ಕೂ ಹೆಚ್ಚು ಇತ್ತು ಎಂಬುವುದು ಶ್ಲಾಘನೀಯ.