Friday, June 27, 2025

ಎಟಿಎಂ ಬಳಕೆ ಶುಲ್ಕ ಹೆಚ್ಚಳ; ATM ನಿಯಮದಲ್ಲಿ ಬದಲಾವಣೆ

ಹೊಸ ಆರ್ಥಿಕ ವರ್ಷದಿಂದಲೇ ಎಟಿಎಂ ಬಳಕೆ ಶುಲ್ಕವು ಏರಿಕೆಯಾಗಿದೆ. ಮೇ 1ರಿಂದ ಎಟಿಎಂ ಚಾರ್ಜ್‌ ಅಧಿಕವಾಗಲಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಆದೇಶದ ಅನ್ವಯ ಬ್ಯಾಂಕ್‌ಗಳು ಶುಲ್ಕ ಹೆಚ್ಚಳ ಮಾಡಿವೆ.

ಮಾಸಿಕ ಉಚಿತ ವಹಿವಾಟು ಮಿತಿ ಮೀರಿದರೆ ಪ್ರತಿ ವಹಿವಾಟಿಗೆ ಗ್ರಾಹಕರು ₹2 ಹೆಚ್ಚುವರಿ ಶುಲ್ಕ ಭರಿಸಬೇಕಿದೆ. ಪ್ರಸ್ತುತ ಪ್ರತಿ ವಹಿವಾಟಿಗೆ ₹21 ಶುಲ್ಕ ವಿಧಿಸಲಾಗುತ್ತಿದೆ. ಇದನ್ನು ಗರಿಷ್ಠ ₹23ಕ್ಕೆ ಏರಿಕೆ ಮಾಡಲಾಗಿದೆ. ಆ ಮೂಲಕ ಆರ್‌ಬಿಐ ಪರಿಷ್ಕೃತ ಶುಲ್ಕವನ್ನು ಪ್ರಕಟ ಮಾಡಿದೆ.

ಗ್ರಾಹಕರು ತಮ್ಮ ಖಾತೆ ಇರುವ ಬ್ಯಾಂಕ್‌ನ ಎಟಿಎಂಗಳಿಂದ ಪ್ರತಿ ತಿಂಗಳು ಉಚಿತವಾಗಿ 5 ವಹಿವಾಟು (ಹಣಕಾಸು ಹಣಕಾಸುಯೇತರ) ನಡೆಸಲು ಅವಕಾಶವಿದೆ. ಇತರೆ ಬ್ಯಾಂಕ್‌ನ ಎಟಿಎಂಗಳಲ್ಲಾದರೆ ಮಹಾನಗರಗಳ ವ್ಯಾಪ್ತಿಯಲ್ಲಿ ಮೂರು ಮತ್ತು ಇತರೆ ಪ್ರದೇಶಗಳಲ್ಲಿ 5 ವಹಿವಾಟುಗಳನ್ನು ಉಚಿತವಾಗಿ ನಡೆಸಬಹುದಾಗಿದೆ.

ಆ ಮೂಲಕ ಮೇ ಒಂದರಿಂದ ಗರಿಷ್ಠ ₹23ಕ್ಕೆ ಏರಿಕೆ ಮಾಡಲಾಗಿದೆ.

Related Articles

Latest Articles