Wednesday, February 19, 2025

ಎಟಿಎಂ ದರೋಡೆ: ಕಳ್ಳರು ನೋಡ ನೋಡುತ್ತಿದ್ದಂತೆ ಸುಟ್ಟು ಭಸ್ಮವಾ್ 21 ಲಕ್ಷ ರೂ.

ಎಟಿಎಂ ದರೋಡೆ ಮಾಡಲು ಹೋಗಿದ್ದ ಕಳ್ಳರ ಮುಂದೆಯೇ ಬರೋಬ್ಬರಿ 21 ಲಕ್ಷ ರೂ. ಹಣ ಸುಟ್ಟು ಭಸ್ಮವಾದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಗ್ಯಾಸ್ ಕಟರ್‌ನಿಂದ ಎಟಿಎಂ ದರೋಡೆ ಮಾಡಲು ಕಳ್ಳರು ಮಾಡಿದ ಪ್ರಯತ್ನದಿಂದ ಬೆಂಕಿ ಕಾಣಿಸಿಕೊಂಡು 21 ಲಕ್ಷ ರೂ. ಸುಟ್ಟು ಬೂದಿಯಾಗಿದೆ.

ಜನವರಿ 13 ರ ಮುಂಜಾನೆ ಡೊಂಬಿವಾಲಿ ಟೌನ್‌ಶಿಪ್‌ನ ವಿಷ್ಣು ನಗರ ಪ್ರದೇಶದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ನ ಎಟಿಎಂ ಕಿಯೋಸ್ಕ್‌ನಲ್ಲಿ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜನವರಿ 13ರಂದು 1 ಹಾಗೂ 2 ಗಂಟೆ ನಡುವೆ ಅಪರಿಚಿತ ವ್ಯಕ್ತಿಗಳು ಎಟಿಎಂ ಕಿಯೋಸ್ಕ್​ ಮುರಿಯಲು ಮೊದಲು ಶಟರ್​ನ ಬೀಗ ಮುರಿದಿದ್ದಾರೆ. ಎಟಿಎಂ ತೆರೆಯಲು ಗ್ಯಾಸ್​ ಕಟರ್​ ಬಳಸಿದ್ದಾರೆ, ಈ ಪ್ರಕ್ರಿಯೆಯಲ್ಲಿ ಉಂಟಾದ ತೀವ್ರ ಶಾಖದಿಂದ ಬೆಂಕಿ ಹೊತ್ತಿಕೊಂಡಿತ್ತು.

ಬೆಂಕಿ ಅವಘಡದಲ್ಲಿ ಎಟಿಎಂನ ಆಂತರಿಕ ಘಟಕಗಳಿಗೆ ತೀವ್ರ ಹಾನಿಯಾಗಿದ್ದು, ಯಂತ್ರ ಸುಟ್ಟು ಕರಕಲಾಗಿದ್ದು, ಸಂಗ್ರಹಿಸಿಟ್ಟಿದ್ದ 21,11,800 ನಗದು ಬೂದಿಯಾಗಿದೆ. ಎಟಿಎಂ ಕೇಂದ್ರವನ್ನು ನಿರ್ವಹಿಸುವ ಜವಾಬ್ದಾರಿಯುತ ಎಲೆಕ್ಟ್ರಾನಿಕ್ ಪಾವತಿ ಸಿಸ್ಟಮ್ಸ್ ಅಧಿಕಾರಿ ನೀಡಿದ ವಿವರಗಳ ಆಧಾರದ ಮೇಲೆ, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಸೆಕ್ಷನ್ 457, 380, 427 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related Articles

Latest Articles