Tuesday, March 18, 2025

ಏಷ್ಯನ್ ಪ್ಯಾರಾ ಗೇಮ್ಸ್: ಪುರುಷರ ಜಾವೆಲಿನ್ F-64′ ನಲ್ಲಿ ಭಾರತ ಸುಮಿತ್ ಗೆ ಚಿನ್ನ, ಪುಷ್ಪೇಂದ್ರ ಸಿಂಗ್ ಗೆ ಕಂಚು

ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಪುರುಷರ ಜಾವೆಲಿನ್ ಎಫ್ 64 ಸ್ಪರ್ಧೆಯಲ್ಲಿ ಸುಮಿತ್ ಅಂಟಿಲ್ ಮತ್ತು ಪುಷ್ಟೇಂದ್ರ ಸಿಂಗ್ ಭಾರತಕ್ಕೆ 2 ಪದಕ ತಂದು ಕೊಟ್ಟಿದ್ದಾರೆ.

ಏಷ್ಯನ್ ಪ್ಯಾರಾಗೇಮ್ಸ್ 2022 ರಲ್ಲಿ ಪುರುಷರ ಜಾವೆಲಿನ್ ಎಫ್ 64 ಸ್ಪರ್ಧೆಯಲ್ಲಿ ಭಾರತದ ಸುಮಿತ್ ಆಂಟಿಲ್ ಚಿನ್ನದ ಪದಕ ಪಡೆದರೆ ಪುಷ್ಪೇಂದ್ರ ಸಿಂಗ್ ಕಂಚಿನ ಪದಕ ಪಡೆದಿದ್ದಾರೆ.

ಸುಮಿತ್ ಅವರು 73.29 ಮೀಟರ್ ಎಸೆಯುವ ಮೂಲಕ ಚಿನ್ನ ಗೆದ್ದು ಹೊಸ ವಿಶ್ವ, ಪ್ಯಾರಾ ಏಷ್ಯನ್ ಮತ್ತು ಗೇಮ್ಸ್ ದಾಖಲೆಗಳನ್ನು ನಿರ್ಮಿಸಿದರು. ಪುಷ್ಪೇಂದ್ರ ಸಿಂಗ್ 62.06 ಮೀಟರ್ ಎಸೆದು ಕಂಚಿನ ಪದಕ ಗೆದ್ದರು.

https://twitter.com/Media_SAI/status/1717001608243073336?t=9JxJ9aHJroihcHcv-7jTsw&s=19

Related Articles

Latest Articles