Friday, June 27, 2025

ಅಶ್ವಿನಿ ಪುನೀತ್ ರಾಜ್​ಕುಮಾರ್ ಡೀಪ್‌ ಫೇಕ್‌ ವಿಡಿಯೋ ವೈರಲ್: ಅಭಿಮಾನಿಗಳಿಂದ ಆಕ್ರೋಶ – ದೂರು

ಅಶ್ವಿನಿ ಪುನೀತ್ ಅವರ ಚಿತ್ರ ಬಳಸಿ ಡೀಪ್ ಫೇಕ್ ವಿಡಿಯೋ ಒಂದನ್ನು ವ್ಯಕ್ತಿಯೊಬ್ಬ ಹಂಚಿಕೊಂಡಿದ್ದು, ತೀರ ಕೆಟ್ಟ ಭಾಷೆ ಬಳಸಿ, ತನ್ನ ವಿಕೃತಿ ಮೆರೆದಿದ್ದ. ಆ ವಿಡಿಯೋ ಮತ್ತು ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇದೀಗ ರಾಜ್ ಕುಟುಂಬದ ಅಭಿಮಾನಿಗಳು ಈ ಬಗ್ಗೆ ಫಿಲಂ ಚೇಂಬರ್ ಅಧ್ಯಕ್ಷ ಎನ್​ಎಂ ಸುರೇಶ್, ಸಾರಾ ಗೋವಿಂದು ಅವರುಗಳಿಗೆ ವಿಡಿಯೋ ಹಾಗೂ ಚಿತ್ರಗಳ ಪ್ರತಿ ನೀಡಿ ದೂರು ನೀಡಿದ್ದು, ಫಿಲಂ ಚೇಂಬರ್ ನವರೇ ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ನಕಲಿ ಖಾತೆಗಳನ್ನು ಬಳಸಿ ಇಂಥಹಾ ಅಸಭ್ಯ ವಿಡಿಯೋಗಳನ್ನು ಹರಿಬಿಡುತ್ತಿದ್ದು, ಸೋಷಿಯಲ್ ಮೀಡಿಯಾಗೆ ಆಧಾರ್ ಲಿಂಕ್ ಕಡ್ಡಾಯ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವಂತೆ ಫಿಲ್ಮ್ ಚೇಂಬರ್​ಗೆ ಮನವಿ ಸಹ ಮಾಡಿದ್ದಾರೆ.

ದೂರು ಸ್ವೀಕರಿಸಿ ಮಾತನಾಡಿರುವ ಅಧ್ಯಕ್ಷ ಎನ್​ಎಂ ಸುರೇಶ್, ‘ಈ ರೀತಿ ಘಟನೆ ಇತ್ತೀಚೆಗೆ ಹೆಚ್ಚಾಗುತ್ತಿದೆ, ಚಿತ್ರರಂಗದಲ್ಲಿ ಎಲ್ಲರೂ ಒಂದು ಕುಟುಂಬ ಇದ್ದ ಹಾಗೆ. ಯಾರೂ ಈ ರೀತಿ ಕೃತ್ಯ ಮಾಡಬಾರದು, ಈ ಬಗ್ಗೆ ಕಮಿಷನರ್, ಸೈಬರ್ ಕ್ರೈಂ ಗೆ ದೂರು ಕೊಡುತ್ತೀವಿ’ ಎಂದು ಭರವಸೆ ನೀಡಿದ್ದಾರೆ.

Related Articles

Latest Articles