Saturday, January 25, 2025

ಮಾಲೀಕನನ್ನೇ ತಿಂದು ಮುಗಿಸಿದ 17 ಸಾಕು ಸಾಯಿಗಳು.! ಕಾರಣವೇನು?

ಮಾಲೀಕನನ್ನೇ 17 ಸಾಕಿದ ನಾಯಿಗಳು ತಿಂದು ಮುಗಿಸಿದ ಭೀಕರ ಘಟನೆ ಅರ್ಜೆಂಟೀನಾದಲ್ಲಿ ನಡೆದಿದೆ.

ಹಸಿದ ನಾಯಿಗಳ ಗುಂಪು ಅನ್ನಹಾಕಿದ ಮಾಲೀಕನನ್ನೇ ತಿಂದು ಮುಗಿಸಿದೆ. ಅರ್ಜೆಂಟೀನಾದ ಮೆಂಡೋಜಾ ಪ್ರಾಂತ್ಯದ ಗಾಯ್ಮಾಲೆನ್ ಪೊಲೀಸರು ಡಿಸೆಂಬರ್ 13 ರಂದು ಪಿಂಚಣಿದಾರ ಕಾರ್ಲೋಸ್ ಟೋನಿನಿ ಅವರ ಶವವನ್ನು ಪತ್ತೆ ಮಾಡಿದ್ದಾರೆ.

ಟೋನಿನಿ ಅವರ 17 ನಾಯಿಗಳ ಗುಂಪು ಟೋನಿನಿ ಅವರನ್ನು ತಿಂದಿದೆ ಎಂದು ವರದಿಯಾಗಿದೆ.

ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆ ಅಕ್ಕಪಕ್ಕದ ನಿವಾಸಿಗಳು ಅನುಮಾನ ಬಂದು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಟೋನಿನಿ ದೇಹದ ಮೂಳೆ ಪೀಸ್ ಗಳು ಹಾಗೂ ರಕ್ತಸಿಕ್ತ ಶರ್ಟ್ ಪತ್ತೆಯಾಗಿದೆ.

ಅನಾರೋಗ್ಯದಿಂದ ಮಾಲೀಕ ಟೋನಿನಿ ಮೃತಪಟ್ಟಿದ್ದು, ಮನೆಯಲ್ಲಿ ಯಾರೂ ನಾಯಿಗಳಿಗೆ ಆಹಾರವನ್ನು ನೀಡದ ಕಾರಣ ಹಸಿದ ನಾಯಿಗಳು ಮನೆ ಮಾಲೀಕನ ಮೃತದೇಹವನ್ನು ನಾಯಿಗಳು ತಿಂದು ಮುಗಿಸಿದೆ ಎಂದು ಶಂಕಿಸಲಾಗಿದೆ. ಟೋನಿನಿ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು, ಜೊತೆಗೆ 17 ನಾಯಿಗಳನ್ನು ಸಾಕಿದ್ದರು ಎಂದು ವರದಿಯಾಗಿದೆ.

Related Articles

Latest Articles