ಕನ್ನಡದ ಸ್ಟಾರ್ ನಿರೂಪಕಿ ಅನುಶ್ರೀ ತಮ್ಮ ಅಭಿಮಾನಿಗಳಿಗೆ ಬಿಗ್ ಸರ್‌ಪ್ರೈಸ್ ಕೊಡಲು ಮುಂದಾಗಿದ್ದಾರೆ. ಆ್ಯಂಕರ್ ಅನುಶ್ರೀ ಅವರ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹೊಸ ವಿಡಿಯೋ ಬಿಡುಗಡೆಯಾಗಿದೆ. ಅದರಲ್ಲಿ ಅನುಶ್ರೀ ಅವರ ಪ್ರೀತಿಯ ಸೆಟ್‌ನಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.
ಹೊಚ್ಚ ಹೊಸ ಪ್ರಾಜೆಕ್ಟ್‌ಗೆ ಕೈ ಹಾಕಿರುವ ಅನುಶ್ರೀ ಅವರು ಹೊಸ ಪ್ರೋಮೋ ರಿಲೀಸ್ ಮಾಡಿದ್ದಾರೆ. ನಿಮಗೆ ನನ್ನ ಪ್ರೀತಿ ಬಗ್ಗೆ ತುಂಬಾ ಪ್ರಶ್ನೆಗಳಿವೆ. ಅದೆಲ್ಲದಕ್ಕೂ ಉತ್ತರ ಕೊಡೋದಕ್ಕೆ ನಾನು ಬರ್ತಾ ಇದ್ದೀನಿ. ಹೊಸ ಪ್ರೀತಿ ಜೊತೆ, ಹೊಸ ಮದುವೆ ಜೊತೆ ಸರ್‌ಪ್ರೈಸ್, ಕಮಿಂಗ್ ಸೂನ್ ಎಂದು ಅನುಶ್ರೀ ಹೇಳಿದ್ದಾರೆ. ಬನ್ನಿ ಪ್ರೀತಿಯನ್ನ ಸೆಲಬ್ರೇಟ್ ಮಾಡೋಣ ಲೆಟ್ಸ್ ಸೆಲಬ್ರೇಟ್ ಲವ್ ಅಂತ ಅನುಶ್ರೀ ಕುತೂಹಲ ಸೃಷ್ಟಿಸಿದ್ದಾರೆ.
- ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡ ಸೀತಾರಾಮ ಸೀರಿಯಲ್ನ ವೈಷ್ಣವಿ ಗೌಡ.. ವರ ಯಾರು?
- ಚಲನ ಚಿತ್ರ ನಟ ಬ್ಯಾಂಕ್ ಜನಾರ್ಧನ್ ಅಸ್ತಂಗತ
- ದಿಶಾ ಸಾಲಿಯಾನ್ ಸಾವಿನ ಪ್ರಕರಣಕ್ಕೆ ಟ್ವಿಸ್ಟ್; ಹಲವು ಮಂದಿ ವಿರುದ್ಧ ದಾಖಲಾಯ್ತು ಎಫ್ಐಆರ್..! ರಾಜಕೀಯ ನಾಯಕರು, ಪೊಲೀಸ್, ನಟಿಯ ಮೇಲೆ ಪ್ರಕರಣ ದಾಖಲು
- ಅಮೃತಧಾರೆ ‘ಅಕ್ಕೊರೇ’ ಮಲ್ಲಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ ಅನ್ವಿತಾ ಸಾಗರ್.! ಹೊಸ ಟ್ವಿಸ್ಟ್ ಕೊಟ್ಟ ನಿರ್ದೇಶಕರು
ಅನುಶ್ರೀ ಅವರ ವಿಡಿಯೋ ನೋಡಿದ ಅಭಿಮಾನಿಗಳು ಆ್ಯಂಕರ್ ಅನುಶ್ರೀ ಅವರು ಈಗಾಗಲೇ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಸ್ವಲ್ಪ ಗ್ಯಾಪ್ ತೆಗೆದುಕೊಂಡಿದ್ದರು. ಇದೀಗ ಆ ಯೂಟ್ಯೂಬ್ ಚಾನೆಲ್‌ನಲ್ಲಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಮೊದಲ ಎಪಿಸೋಡ್‌ನಲ್ಲಿ ತರುಣ್ ಸುಧೀರ್ ಹಾಗೂ ಸೋನಲ್ ಅವರನ್ನೇ ಗೆಸ್ಟ್ ಆಗಿ ಕರೆದುಕೊಂಡು ಬಂದಿರಬಹುದು ಎಂದು ಗೆಸ್ ಮಾಡುತ್ತಿದ್ದಾರೆ.