ಸದ್ಯದ ಟಾಪ್ ಸೀರಿಯಲ್ಸ್ಗಳಲ್ಲಿ ಜೀ ವಾಹಿನಿಯ ಅಮೃತಧಾರೆ ಕೂಡ ಒಂದು. ಕಿರುತೆರೆ ಲೋಕದಲ್ಲಿ ಟಿಆರ್‌ಪಿ ಕಿಂಗ್ ಆಗಿರುವ ಝೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿಯ ಕತೆ ವೀಕ್ಷಕರಿಗೆ ತುಂಬಾನೆ ಇಷ್ಟವಾಗ್ತಿದೆ.
ಟಿಆರ್‌ಪಿಯಲ್ಲಿ ಸದಾ ಮುಂದಿರುವ ರಾಜೇಶ್ ನಟರಂಗ, ಛಾಯಾ ಸಿಂಗ್, ವನಿತಾ ವಾಸು ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿದ್ದವು. ಈ ಹಿಂದೆ ಸಾರಾ ಅಣ್ಣಯ್ಯ, ಶಶಿ ಹೆಗ್ಡೆ ಆಚೆ ಬಂದಿದ್ದರು. ಇದಾದ ಬಳಿಕ ಮಲ್ಲಿ ಪಾತ್ರದಲ್ಲಿ ನಟಿಸುತ್ತಿದ್ದ ರಾಧಾ ಭಗವತಿ ಕೂಡ ಸೀರಿಯಲ್ನಿಂದ ಆಚೆ ಬಂದಿದ್ದರು.
ಇದೀಗ ಅಮೃತಧಾರೆಯ ಮಲ್ಲಿ ಪಾತ್ರ ಬದಲಾಗಿದ್ದು, ಇದರ ಜೊತೆಯಲ್ಲಿಯೇ ಕಥೆಯಲ್ಲಿ ಬಿಗ್ ಟ್ವಿಸ್ಟ್ ಎದುರಾಗಿದೆ. ಇಷ್ಟು ದಿನ ಮಾತು ಬಾರದ ಅಜ್ಜಯ್ಯನ ಮೊಮ್ಮಗಳಾಗಿದ್ದ ಮಲ್ಲಿಯ ಜನ್ಮ ರಹಸ್ಯ ಗೌತಮ್ ಮುಂದೆ ಬಯಲಾಗಿದೆ. ಇದಪ್ಪಾ ಟ್ವಿಸ್ಟ್ ಎಂದು ಜನರು ಹೊಗಳುತ್ತಿದ್ದಾರೆ. ಸದಾ ಪಾಸಿಟಿವ್ ಟರ್ನ್‌ಗಳೊಂದಿಗೆ ಸಾಗುವ ಸೀರಿಯಲ್ ಎಪಿಸೋಡ್ ಜನರ ಮೆಚ್ಚುಗೆ ಗಳಿಸಿದೆ.
ಮಲ್ಲಿ ಪಾತ್ರದಲ್ಲಿ ನಟಿಸುತ್ತಿದ್ದ ರಾಧಾ ಭಗವತಿ ಅವರು ಸೀರಿಯಲ್ನಿಂದ ಆಚೆ ಬಂದ ಬಳಿಕ ಆ ಜಾಗಕ್ಕೆ ನಟಿ ಅನ್ವಿತಾ ಸಾಗರ್ ಆಗಮಿಸಿದ್ದಾರೆ. ತನ್ನ ಸೋದರ ಜೈದೇವ್‌ನ ಹೆಂಡ್ತಿ ಅಂದರೆ ಮಲ್ಲಿ ಸಾಮಾನ್ಯ ಕುಟುಂಬದವಳಲ್ಲ. ಆಕೆ ರಾಜೇಂದ್ರ ಭೂಪತಿಯ ಮಗಳು ಎಂಬ ವಿಷಯ ಗೌತಮ್ ದಿವಾನ್‌ಗೆ ಗೊತ್ತಾಗಿದೆ.
ನಟಿ ಅನ್ವಿತಾ ಸಾಗರ್ ಅವರು ಈಗಾಗಲೇ ವೀಕ್ಷಕರಿಗೆ ಚಿರಪರಿಚಿತರಾಗಿದ್ದಾರೆ. ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ಆದ್ಯಾ ಪಾತ್ರದಲ್ಲಿ ಅನ್ವಿತಾ ಸಾಗರ್ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಅನ್ವಿತಾ ಸಾಗರ್ ಅಮೃತಧಾರೆ ಸೀರಿಯಲ್ ಮೂಲಕ ಝೀ ವಾಹಿನಿಗೆ ಕಮ್ ಬ್ಯಾಕ್ ಮಾಡಿದ್ದಾರೆ.
ಅಕ್ಕೋರೆ ಎಂದು ಚಾಪು ಮೂಡಿಸಿದ್ದ ರಾಧಾ ಭಗವತಿ ಪಾತ್ರಕ್ಕೆ ಅನ್ವಿತಾ ಸಾಗರ್ ಅವರನ್ನು ಪರಿಚಯ ಮಾಡಲಾಗಿದೆ. ಇದನ್ನು ಕೆಲವರಿಗೆ ಅರಗಿಸಿಕೊಳ್ಳಲು ಕೆಲ ದಿನಗಳೇ ಬೇಕು. ಇನ್ನು ಕೆಲ ವೀಕ್ಷಕರು ಕಥೆಯಲ್ಲಿ ತಿರುವು ಕೊಟ್ಟಿದ್ದನ್ನು ಮೆಚ್ಚಿಕೊಂಡಿದ್ದಾರೆ. ಈ ಹಿಂದೆ ಟಾಪ್ ಸೀರಿಯಲ್‌ಗಳ ಪಾತ್ರಧಾರಿಗಳು ಬದಲಾವಣೆ ಕಂಡಾಗ ಕಥೆ ಹಳ್ಳ ಹಿಡಿದಿತ್ತು. ಹೀಗೆ ಆಗಬಾರದೆಂದು ವೀಕ್ಷಕರು ಮನವಿ ಮಾಡಿಕೊಂಡಿದ್ದಾರೆ.