ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮಗ ಅನಂತ್ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಅದ್ಧೂರಿಯಾಗಿ ನಡೆದಿದೆ. ಮದುವೆಗೆ ಸಿನಿಮಾ, ಕ್ರೀಡೆ, ರಾಜಕೀಯ ಹೀಗೆ ವಿವಿಧ ಕ್ಷೇತ್ರಗಳ ಗಣ್ಯರು ಬಂದು ಶುಭಾಶಯ ಕೋರಿದ್ದಾರೆ. ಸಾವಿರಾರು ಕೋಟಿ ವೆಚ್ಚದ ಈ ಮದುವೆ ಈಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದೆ.
ಮದುವೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿವೆ. ಇದರ ಮಧ್ಯೆಯೇ ಬಾಲಿವುಡ್ ಬಿಗ್ ಬಿ ಫ್ಯಾಮಿಲಿ ವಿಚಾರಕ್ಕೆ ಸುದ್ದಿಯಾಗಿದೆ. ಹಲವು ದಿನಗಳಿಂದ ಸುದ್ದಿ ಮಾಡಿದ್ದ ಗಾಸಿಪ್ ಈಗ ಬಯಲಾಗಿದೆ. ಬಿಗ್-ಬಿ ಮನೆಯಲ್ಲಿ ಎಲ್ಲವೂ ಸರಿಯಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಕಳೆದ ಎರಡ್ಮೂರು ವರ್ಷಗಳಿಂದ ನಟಿ ಐಶ್ವರ್ಯ ರೈ ಮತ್ತು ನಟ ಅಭಿಷೇಕ್ ಬಚ್ಚನ್ ಡಿವೋರ್ಸ್ ವದಂತಿ ಸದ್ದು ಮಾಡುತ್ತಿತ್ತು. ಹಲವು ಬಾರಿ ವಿಚ್ಛೇದನ ವಿವಾದಕ್ಕೆ ತೇಪೆ ಹಚ್ಚುವ ಕಾರ್ಯವೂ ನಡೆದಿತ್ತು.
ಮೇಲ್ನೋಟಕ್ಕೆ ಎಲ್ಲವೂ ಸರಿ ಅನಿಸಿದ್ರೂ ಮತ್ತೆ ಯಾಕೋ ಅಭಿಷೇಕ್ ಮತ್ತು ಐಶ್ವರ್ಯಾ ರೈ ಮಧ್ಯೆ ಬಿರುಕು ಮುಂದುವರಿದ್ಯಾ? ಅನ್ನೋ ಚರ್ಚೆ ಜೋರಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ವಿಡಿಯೋ ಒಂದು ವೈರಲ್ ಆಗಿದೆ. ಬಿಗ್ ಬಿ ಕುಟುಂಬ ಒಂದೆಡೆಯಾದ್ರೆ ಐಶ್ ಆರಾಧ್ಯ ಎಂದಿನಂತೆ ಜೊತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
ಅನಂತ್ ಅಂಬಾನಿ ಮದುವೆಗೆ ಬಿಗ್-ಬಿ ಫ್ಯಾಮಿಲಿ ಭಾಗಿಯಾಗಿತ್ತು. ಅಮಿತಾಭ್, ಜಯಾ, ಅಭಿಷೇಕ್ ಸೇರಿದಂತೆ ಐಶ್ವರ್ಯ ರೈ ಮತ್ತು ಮಗಳು ಆರಾಧ್ಯ ಕೂಡ ಭಾಗವಹಿಸಿದ್ದರು. ಕುತೂಹಲ ಎಂದರೆ ಫೋಟೋ ಶೂಟ್ ವೇಳೆ ಐಶ್ವರ್ಯ ಮತ್ತು ಆರಾಧ್ಯ ಹೊರತುಪಡಿಸಿ ಉಳಿದವರು ಜೊತೆಯಾಗಿ ಕಾಣಿಸಿಕೊಂಡಿದ್ರು.
ಬಳಿಕ ಪ್ರತ್ಯೇಕವಾಗಿ ಐಶ್ವರ್ಯಾ ಮತ್ತು ಆರಾಧ್ಯ ಫೋಟೋ ಪೋಸ್ ನೀಡಿದ್ರು. ತಾಯಿ-ಮಗಳು ಪ್ರತ್ಯೇಕವಾಗಿ ಬಂದಿದ್ದು, ಅಭಿಷೇಕ್ ಮಾತ್ರ ತನ್ನ ತಂದೆ ತಾಯಿಯೊಂದಿಗೆ ಬಂದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಜತೆಗೆ ಐಶ್ವರ್ಯಾ ಮತ್ತು ಅಭಿಷೇಕ್ ವಿಚ್ಛೇದನದ ಸುದ್ದಿಗೆ ಮತ್ತಷ್ಟು ಬಲ ತುಂಬಿದೆ. ಇದಕ್ಕೆ ನೆಟ್ಟಿಗರು ಪ್ರತಿಕ್ರಿಯೆ ಮಾಡಿದ್ದು, ಐಶ್ವರ್ಯ ಹಾಗೂ ಆರಾಧ್ಯ ಬೆಸ್ಟ್ ಮದರ್ ಡಾಟರ್ ಎಂದಿದ್ದಾರೆ. ಕೆಲವರು ಡಿವೋರ್ಸ್ ಪಕ್ಕಾ ಎಂದಿದ್ದಾರೆ.
ಇನ್ನೂ ಕೆಲವರು, ಐಶ್ವರ್ಯ ರೈ ಟಾಪ್ ನಟಿ ಸ್ಥಾನದಲ್ಲಿರುವಾಗಲೇ ಎಲ್ಲವನ್ನೂ ಬಿಟ್ಟು ಕುಟುಂಬಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದರು. ಆದರೆ ಸಿಕ್ಕಿದ್ದು ಮಾತ್ರ ನಿರಾಕರಣೆ. ಐಶ್ವರ್ಯ ಮಗಳ ಜೊತೆ ಖುಷಿಯಾಗಿರಲಿ ಎಂದಿದ್ದಾರೆ.