Wednesday, April 23, 2025

ವಿಧಾನಸೌಧಕ್ಕೂ ಎಂಟ್ರಿಕೊಟ್ಟ ಎಐ; ಶಾಸಕರ ಎಂಟೆಡೆನ್ಸ್ ಹೇಳುತ್ತೆ ಎಐ ಕ್ಯಾಮರಾಗಳು

ಕರ್ನಾಟಕ ವಿಧಾನಮಂಡಲ ಮುಂಗಾರು ಅಧಿವೇಶನ ಆರಂಭವಾಗಿದೆ. ಇದೇ ಮೊದಲ ಬಾರಿಗೆ ವಿಧಾನಸಭೆಯಲ್ಲಿ ಶಾಸಕರ ಹಾಜರಾತಿಯನ್ನು ದಾಖಲಿಸುವ ಕೆಲಸಕ್ಕೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸ್ಪರ್ಶ ನೀಡಲಾಗಿದೆ.

ಶಾಸಕರು ಸದನವನ್ನು ಪ್ರವೇಶಿಸುವ ಎಲ್ಲಾ ಮೂರು ಬಾಗಿಲುಗಳಲ್ಲಿ ಎಐ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಈ ಎಲ್ಲಾ ಕ್ಯಾಮರಾಗಳು ಮತ್ತು ಸದನದ ಹೊರಗೆ ಅಳವಡಿಸಲಾಗಿರುವ ಇನ್ನೊಂದು ಕ್ಯಾಮರಾವು ಶಾಸಕರು ವಿಧಾನಸೌಧ ಪ್ರವೇಶಿಸುವಾಗ ಅವರ ಮುಖಗಳನ್ನು ರೆಕಾರ್ಡ್ ಮಾಡುತ್ತದೆ ಮತ್ತು ಶಾಸಕರು ಸದನದೊಳಗೆ ಎಷ್ಟು ನಿಮಿಷ ಅಥವಾ ಗಂಟೆಗಳ ಕಾಲ ಇದ್ದರು ಎಂಬ ರಿಯಲ್ ಟೈಮ್ ದತ್ತಾಂಶವನ್ನು ನೀಡುತ್ತದೆ.

ಸದನದಲ್ಲಿ ಹೆಚ್ಚು ಗಂಟೆಗಳ ಕಾಲ ಕುಳಿತುಕೊಳ್ಳುವ ಶಾಸಕರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಸ್ಪೀಕರ್ ಯುಟಿ ಖಾದರ್ ಈ ಹಿಂದೆ ಘೋಷಿಸಿದ್ದರು. ಸೋಮವಾರ ಮುಂಗಾರು ಅಧಿವೇಶನದ ಮೊದಲ ದಿನದಂದು, ಈ ಕ್ಯಾಮರಾಗಳ ಮುಂದೆ ಫೇಸ್​​ ರೆಕಗ್ನಿಷನ್ ತಂತ್ರಜ್ಞಾನದಡಿ ಹಾಜರಾತಿ ದಾಖಲು ಮಾಡಿಕೊಳ್ಳಲು ಶಾಸಕರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ.

ವಿಧಾನಸೌಧವು ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದ್ದು, ದೇಶ ಮತ್ತು ಪ್ರಪಂಚದ ಅನೇಕ ಜನರು ಇಲ್ಲಿಗೆ ವೀಕ್ಷಣೆಗೆ ಭೇಟಿ ನೀಡುತ್ತಾರೆ. ನಾವು ಹಂತ ಹಂತಗಳಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುತ್ತಿದ್ದೇವೆ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ.

Related Articles

Latest Articles