ಟಾಲಿವುಡ್ ಕಿಸ್ಸಿಂಗ್ ಸ್ಟಾರ್ ವಿಜಯ್ ದೇವರಕೊಂಡ ಮತ್ತು ಸಮಂತಾ ಜೋಡಿಯಾಗಿ ನಟಿಸಿರುವ ಖುಷಿ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಕಂಡಿದೆ. 50 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಖುಷಿ ಸಿನಿಮಾಗೆ ದೇವರಕೊಂಡ ಸುಮಾರು 1 ಕೋಟಿ ಸಂಭಾವನೆ ಪಡೆದಿದ್ದರು.
ಸಿನಿಮಾ ಯಶಸ್ಸಿನ ಬೆನ್ನಲ್ಲಿ ವಿಶಾಖಪಟ್ಟಣದಲ್ಲಿ ಕಾರ್ಯಕ್ರಮ ವ್ಯವಸ್ಥೆಯಾಗಿತ್ತು ಆಗ ವಿಜಯ್ ವಿಶೇಷ ಘೋಷಣೆ ಸಖತ್ ಸುದ್ದಿ ಮಾಡುತ್ತಿದೆ.
‘ನಾನು ಒಂದು ಕೋಟಿ ರೂಪಾಯಿ ಹಣವನ್ನು ಸುಮಾರು 100 ರೈತ ಕುಟುಂಬಗಳಿಗೆ ನೀಡಬೇಕು ಎಂದು ನಿರ್ಧಾರ ಮಾಡಿರುವೆ, ಇದರಿಂದ ನನಗೆ ತುಂಬಾ ಖುಷಿ ಆಗಲಿದೆ.
ನಾವು ಪಟ್ಟಿ ಮಾಡುವ 100 ರೈತ ಕುಟುಂಬಗಳಿಗೆ 1 ಲಕ್ಷ ಹಣವನ್ನು ವರ್ಗಾವಣೆ ಮಾಡುತ್ತೀವಿ. ಇದು ನನ್ನ ವೈಯಕ್ತಿಕ ಖಾತೆಯಿಂದ ನಿಮಗೆ ಹಣ ಬರಲಿದೆ’ ಎಂದು ವೇದಿಕೆ ಮೇಲೆ ನಿಂತು ತೆಲುಗು ಭಾಷೆಯಲ್ಲಿ ಘೋಷಣೆ ಮಾಡುತ್ತಾರೆ. ವಿಜಯ್ ಮಾತು ಕೇಳಿ ಅಲ್ಲಿದ್ದ ಜನತೆ ಚಪ್ಪಾಳೆ ಹೊಡೆದು ಸಂಭ್ರಮಿಸಿದ್ದಾರೆ.