ಚಿತ್ರದುರ್ಗ: ಬೈಕ್ ಹಾಗೂ ಬೊಲೆರೋ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಓರ್ವ ಯುವಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಳ್ಳಕೆರೆ ತಾಲ್ಲೂಕಿನ ಗುಂತುಕೋಲಮ್ಮನಹಳ್ಳಿ ಹಾಗೂ ತೊರೆಕೋಲಮ್ಮನಹಳ್ಳಿ ಮಾರ್ಗದ ಮಧ್ಯೆ ರಸ್ತೆಯಲ್ಲಿ ಘಟನೆ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಚಳ್ಳಕೆರೆ ಗಾಂಧಿ ನಗರದ ಸಲ್ಮಾನ್ (26) ಎಂದು ಗುರುತಿಸಲಾಗಿದೆ. ನಾಯಕಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.