Thursday, November 14, 2024

ಪುತ್ತೂರು: ಮಳೆ ಬಂದು ಕೂಲ್ ಕೂಲ್‌..! ಆಟೋದೊಳಗೆ ಅಸಭ್ಯವಾಗಿ ವರ್ತಿಸಿ ಸಿಕ್ಕಿಬಿದ್ದ ಜೋಡಿ

ಕರಾವಳಿಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ವಾತವರಣ ಕೂಲ್‌ ಕೂಲ್‌ ಆಗಿದೆ. ಆ ನಡುವೆ ಜೋಡಿಯೊಂದು ಆಟೋದೊಳಗೆ ಮೈಮರೆತಿದ್ದಾರೆ. ಆಟೋವನ್ನು ಬಂದ್‌ ಮಾಡಿ ಹಗಲು ಹೊತ್ತಲ್ಲೇ ಖುಲ್ಲಂ ಖುಲ್ಲಂ ಮಾಡೋದಕ್ಕೆ ಮುಂದಾಗಿ ಸಾರ್ವಜನಿಕರ ಕೈಗೆ ರೆಡ್‌ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರಿನ ಗದ್ದೆಯೊಂದರ ಸಮೀಪದಲ್ಲಿ ಆಟೋ ನಿಲ್ಲಿಸಿ ಯುವಕ ಹಾಗೂ ಯುವತಿ ಅಸಭ್ಯವಾಗಿ, ಅದೂ ಕೂಡ ಹಗಲು ಹೊತ್ತಲ್ಲೇ ವರ್ತಿಸಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರು ಹಾಗೂ ಸಿಬ್ಬಂದಿಗಳು ಯುವಕ ಯುವತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆಟೋದೊಳಗೆ ಅನುಚಿತವಾಗಿ ವರ್ತಿಸುತ್ತಿದ್ದ ಜೋಡಿಯನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು ಅವರಿಗೆ ಬುದ್ದಿ ಹೇಳಿ, ಎಚ್ಚರಿಕೆ ಕೊಟ್ಟು, ಈ ರೀತಿಯಾಗಿ ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಮಾಡುವುದು ಸರಿಯಲ್ಲ ಎಂದು ಹೇಳಿ ಕಳುಹಿಸಿದ್ದಾರೆ.

ಸುದ್ದಿ ಮೂಲ: ಝೂಮ್‌ಇನ್ ಟಿವಿ

Related Articles

Latest Articles