ಉಡುಪಿ: ವಿದ್ಯಾರ್ಥಿನಿಯೋರ್ವಳು ದೇಶ ವಿರೋಧಿ ಬರಹ ಬರೆದು ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಕಾರ್ಕಳ ತಾಲೂಕಿನ ನಿಟ್ಟೆಯ ಇಂಜಿನಿಯರಿಂಗ್ ಕಾಲೇಜಿನ ವಸತಿ ನಿಲಯದ ಗೋಡೆಯ ಮೇಲೆ ವಿದ್ಯಾರ್ಥಿನಿ ದೇಶ ವಿರೋಧಿ ಬರಹಗಳನ್ನು (Anti-national writing) ಬರೆದಿದ್ದಾಳೆ.
“ಹಿಂದೂಸ್ಥಾನ್ ನಹಿ ಮುಸ್ಲಿಂಸ್ಥಾನ ಬೋಲ್”. “ಮುಸ್ಲಿಂ ಜಿಂದಾಬಾದ್ ಹಿಂದೂ ಫ** ಆ” ಎಂದು (Hindustan nahi muslim sthan bola Muslim zidabad Hindu fk o*f) ಇಂಗ್ಲಿಷ್ನಲ್ಲಿ ಗೋಡೆಯ ಮೇಲೆ ಬರೆದಿದ್ದಾಳೆ.
ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇಶ ವಿರೋಧಿ ಬರಹ ಬರೆದ ವಿದಾರ್ಥಿನಿಗಾಗಿ ತೀವ್ರ ಶೋಧ ನಡೆಸಿದ್ದಾರೆ.