Friday, June 27, 2025

ಉಗ್ರರಿಗೆ ನೆರವು ನೀಡಿದ್ದ ದೇಶದ್ರೋಹಿ ಆತ್ಮಹತ್ಯೆ – ಭದ್ರತಾಪಡೆ ಕಣ್ಮುಂದೆಯೇ ನದಿಗೆ ಹಾರಿದ ಯುವಕ

ಜಮ್ಮು ಕಾಶ್ಮೀರದ ಕುಲ್ಗಾಮ್​​ನಲ್ಲಿ ಉಗ್ರರಿಗೆ ಆಹಾರ ಹಾಗೂ ಸೂರಿನ ವ್ಯವಸ್ಥೆ ಮಾಡಿದ್ದ ದೇಶದ್ರೋಹಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಮ್ತಿಯಾಜ್​ ಅಹ್ಮದ್​ ಮಗ್ರೆ ಎಂಬಾತ ಆತ್ಮಹತ್ಯೆಗೆ ಶರಣಾದ ಯುವಕ.

ಉಗ್ರರ ಅಡಗುತಾಣವನ್ನು ತೋರಿಸಲು ಪೊಲೀಸ್ ಮತ್ತು ಸೇನೆಯನ್ನು ಮುನ್ನಡೆಸುತ್ತಿದ್ದಾಗ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ವೆಶಾವ್ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿದ ಎರಡು ದಿನಗಳ ಬಳಿಕ ಮೃತದೇಹ ಪತ್ತೆಯಾಗಿದೆ.

ಇನ್ನು ಈ ಘಟನೆಯತ್ತ ಮೆಹಬೂಬ್‌ ಮುಫ್ತಿ ಓಲೈಕೆಗೆ ಮುಂದಾಗಿದ್ದಾರೆ. ಮಾಜಿ ಸಿಎಂ ಮೆಹಬೂಬ್ ಮುಫ್ತಿ ಇದನ್ನು ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ದೇಶದ್ರೋಹಿ ಯುವಕನ ಸಾವಿನ ಪ್ರಕರಣವನ್ನು ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಪೊಲೀಸರ ಪ್ರಕಾರ, ಇಮ್ತಿಯಾಜ್​ ಅಹ್ಮದ್​ ಮಗ್ರೆಗೆ ಉಗ್ರಗಾಮಿಗಳ ಅಡಗು ತಾಣಗಳ ಬಗ್ಗೆ ತಿಳಿದಿತ್ತು. ಆತ ತನಿಖೆ ವೇಳೆ ಸಹಾಯ ಮಾಡಿದ್ದಾಗಿ ಒಪ್ಪಿಕೊಂಡಿದ್ದ. ಸ್ಥಳ ಮಹಜರು ಮಾಡುವ ವೇಳೆ ನದಿಗೆ ಹಾರಿ ತಪ್ಪಿಸಿಕೊಳ್ಳಲು ಮುಂದಾಗಿ ಜೀವ ಕಳೆದುಕೊಂಡಿದ್ದಾಗಿ ಹೇಳಿದ್ದಾರೆ.

ಹಣದಾಸೆಗೆ ಮಾಹಿತಿ ಸೋರಿಕೆ – ಇಬ್ಬರ ಬಂಧನ
ಇತ್ತ, ಕೇವಲ 5 ರಿಂದ 10 ಸಾವಿರಕ್ಕೆ ಪಾಕಿಸ್ತಾನದ ಐಎಸ್‌ಐಗೆ ಮಾಹಿತಿ ಸೋರಿಕೆ ಮಾಡುತ್ತಿದ್ದ ಪಾಲಕ್ ಶೇರ್ ಮಸಿಹ್ ಮತ್ತು ಸೂರಜ್ ಮಸಿಹ್​ನನ್ನು ಪಂಜಾಬ್‌ ಪೊಲೀಸರು ಬಂಧಿಸಿದ್ದಾರೆ. ಅಮೃತಸರದಲ್ಲಿರುವ ಸೇನಾ ಸೂಕ್ಷ್ಮ ವಲಯ ಮತ್ತು ವಾಯುನೆಲೆಯ ಸೂಕ್ಷ್ಮ ಮಾಹಿತಿಗಳು ಮತ್ತು ಫೋಟೋಗಳನ್ನು ಪಾಕಿಸ್ತಾನದ ಐಎಸ್‌ಐಗೆ ಸೋರಿಕೆ ಮಾಡುತ್ತಿದ್ದರು ಎನ್ನಲಾಗಿದೆ.

ಎಲ್​ಓಸಿಯಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿರುವ ನಡುವೆಯೇ ಪಾಕಿಸ್ತಾನ ಮತ್ತೆ ಮತ್ತೆ ಕದನ ವಿರಾಮ ಉಲ್ಲಂಘಿಸಿ ಉದ್ಧಟತನ ಮೆರೆಯುತ್ತಿದೆ. ಈಗಾಗಲೇ ಸತತ 11ನೇ ದಿನವೊ ಕದನ ವಿರಾಮ ಉಲ್ಲಂಘಿಸಿದೆ. ಗಡಿಯುದ್ದಕ್ಕೂ ಭಾರತೀಯ ಸೇನಾ ನೆಲೆಗಳ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸ್ತಿದೆ.

Related Articles

Latest Articles