Friday, June 27, 2025

ಐಪಿಎಲ್ ಪಾಯಿಂಟ್ಸ್​ ಟೇಬಲ್​​ನಲ್ಲಿ ಭಾರೀ ಏರಿಳಿತ.! ಪ್ಲೇ-ಆಫ್​ಗಾಗಿ ಭಾರೀ ಪೈಪೋಟಿ

ಟಾಟಾ ಐಪಿಎಲ್​​ ೨೦೨೫ ಅಂತಿಮಘಟ್ಟದತ್ತ ಹೆಜ್ಜೆ ಇಟ್ಟಿದೆ. ಆದರೆ ಪ್ಲೇ-ಆಫ್​​ಗೆ ಯಾವೆಲ್ಲ ತಂಡಗಳು ಪ್ರವೇಶಿಸುತ್ತವೆ ಅನ್ನುವುದು ಕುತೂಹಲ ಮೂಡಿಸಿದೆ. ಯಾಕೆಂದರೆ ಪ್ಲೇ-ಆಫ್​​ಗಾಗಿ ತಂಡಗಳ ಪೈಪೋಟಿ ತೀವ್ರವಿದೆ.

ಸದ್ಯದ ಅಂಕಪಟ್ಟಿ ಪೈಕಿ, 11 ಪಂದ್ಯಗಳಲ್ಲಿ 8 ಮ್ಯಾಚ್ ಗೆದ್ದಿರುವ ಆರ್​​ಸಿಬಿ ಅಗ್ರಸ್ಥಾನದಲ್ಲಿದೆ. ಆರ್​ಸಿಬಿ ಸದ್ಯಕ್ಕೆ ಪ್ಲೇ-ಆಫ್​ ರೇಸ್​ನಲ್ಲಿ ಸುರಕ್ಷಿತವಾಗಿದೆ. ಆದರೆ ಇನ್ನುಳಿದ ಮೂರು ತಂಡಗಳ ಆಯ್ಕೆಗೆ ಭಾರೀ ಪೈಪೋಟಿ ಇದೆ.

ಐದನೇ ಸ್ಥಾನದಲ್ಲಿ ಕೂತಿದ್ದ ಶ್ರೇಯಸ್​ ಅಯ್ಯರ್ ನೇತೃತ್ವದ ತಂಡ Panjab Kings ಲಕ್ನೋ ತಂಡವನ್ನು (ಎಲ್​ಎಸ್​ಜಿ) ಸೋಲಿಸಿ ನಂಬರ್​ 2ನೇ ಸ್ಥಾನಕ್ಕೇರಿದೆ. ಆ ಮೂಲಕ ಎರಡನೇ ಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್​ ಮೂರನೇ ಸ್ಥಾನಕ್ಕೆ ಕುಸಿದಿದೆ. ಅದೇ ರೀತಿ, ಮೂರನೇ ಸ್ಥಾನದಲ್ಲಿದ್ದ ಗುಜರಾತ್ ಟೈಟಾನ್ಸ್, ನಾಲ್ಕನೇ ಸ್ಥಾನಕ್ಕೆ ಕುಸಿದೆ.

ಆರ್​ಸಿಬಿ, ಗುಜರಾತ್​, ಮುಂಬೈ ಇಂಡಿಯನ್ಸ್, ಪಂಜಾಬ್ ತಂಡಗಳ ಜೊತೆ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಐದನೇ ಸ್ಥಾನದಲ್ಲಿದ್ದುಕೊಂಡು ಹೋರಾಟ ನಡೆಸ್ತಿದೆ. ಆರು ಪಂದ್ಯವನ್ನು ಗೆದ್ದುಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್​ಗೆ ಒಂದು ಪಂದ್ಯಾಟ ಬಾಕಿ ಇವೆ.

ಇಂದು ಸನ್​ ರೈಸರ್ಸ್ ಹೈದರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ ನಡೆಯಲಿದೆ. ಇವತ್ತಿನ ಪಂದ್ಯವನ್ನು ಗೆದ್ದರೆ ಡೆಲ್ಲಿ ಕ್ಯಾಪಿಟಲ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಮತ್ತೆ ಜಂಪ್ ಆಗಲಿದೆ.

ಡೆಲ್ಲಿ ಜೊತೆಗೆ ಕೋಲ್ಕತ್ತ ನೈಟ್ ರೈಡರ್ಸ್ ಕೂಡ ಪ್ಲೇ-ಆಫ್ ರೇಸ್​ನಲ್ಲಿದ್ದು, ಸದ್ಯ ಪಾಯಿಂಟ್ಸ್ ಟೇಬಲ್​​ನಲ್ಲಿ 6ನೇ ಸ್ಥಾನದಲ್ಲಿದೆ. ಇನ್ನು ಎಲ್​ಎಸ್​ಜಿ 7ನೇ ಸ್ಥಾನದಲ್ಲಿದ್ದರೆ, ರಾಜಸ್ಥಾನ್ ರಾಯಲ್ಸ್​ 8, ಸನ್​ ರೈಸರ್ಸ್​ ಹೈದರಾಬಾದ್ 9ನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಕೊನೆಯ ಸ್ಥಾನದಲ್ಲಿದೆ.

Related Articles

Latest Articles