ಟಾಟಾ ಐಪಿಎಲ್ ೨೦೨೫ ಆವೃತ್ತಿಯಲ್ಲಿ ಸತತ ಸೋಲನ್ನೇ ಕಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ಗೆಲುವನ್ನು ಆಚರಿಸಿಕೊಂಡಿದೆ. ಲಕ್ನೋ ವಿರುದ್ಧ ಸಿಎಸ್‌ಕೆ ಗೆಲುವು ಸಾಧಿಸಿದೆ. ಸತತ ಐದು ಪಂದ್ಯಗಳಲ್ಲಿ ಸೋತ ನಂತರ, ಚೆನ್ನೈ ತಂಡವು ಈ ಸೀಸನ್ನಲ್ಲಿ ಎರಡನೇ ಗೆಲುವು ದಾಖಲಿಸಿದೆ.
ಲಕ್ನೋ ನೀಡಿದ 167 ರನ್ಗಳ ಗುರಿ ಬೆನ್ನಟ್ಟಿದ ಸಿಎಸ್‌ಕೆ ಕೊನೆಯ ಓವರ್‌ನಲ್ಲಿ ಲಕ್ನೋ ತಂಡವನ್ನು ಮಣಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನಲ್ಲಿ ಎಂಎಸ್ ಧೋನಿ ಅವರ ಪ್ರದರ್ಶನ ಅತ್ಯುತ್ತಮವಾಗಿತ್ತು. ತಂಡ ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್ಗೆ ಬಂದ ಧೋನಿ 11 ಎಸೆತಗಳಲ್ಲಿ ಅಜೇಯ 26 ರನ್ ಗಳಿಸಿದರು.
ಶಿವಂ ದುಬೆ 37 ಎಸೆತಗಳಲ್ಲಿ ಅಜೇಯ 43 ರನ್ ಗಳಿಸಿದರು. ರಚಿನ್ ರವೀಂದ್ರ 37 ರನ್ ಮತ್ತು ಶೇಖ್ ರಶೀದ್ 27 ರನ್ಗಳ ಕಾಣಿಕೆ ನೀಡಿದರು. ಇನ್ನು ಮೊದಲು ಬ್ಯಾಟ್ ಮಾಡಿದ್ದ ಎಲ್ಎಸ್ಜಿ 7 ವಿಕೆಟ್ ಕಳೆದುಕೊಂಡು 166 ರನ್ಗಳಿಸಿತ್ತು.
ವಿಶೇಷ ಅಂದರೆ ನಾಯಕ ರಿಷಬ್ ಪಂತ್ ಅವರು ಸ್ಫೋಟಕ ಬ್ಯಾಟಿಂಗ್ ಆಡಿದರು. 49 ಬಾಲ್ನಲ್ಲಿ ನಾಲ್ಕು ಸಿಕ್ಸ್, ನಾಲ್ಕು ಬೌಂಡರಿ ಬಾರಿಸಿ ಬರೋಬ್ಬರಿ 63 ರನ್ಗಳನ್ನು ಕಲೆ ಹಾಕಿದರು. ಮಿಚೆಲ್ ಮಾರ್ಷ್ ಎಲ್ಎಸ್ಜಿ ಪರ 30 ರನ್ಗಳ ಕಾಣಿಕೆ ನೀಡಿದರು.