ಹೊಸದಿಲ್ಲಿ: ಇಸ್ರೋವಿನ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಚಂದ್ರಯಾನ ೩ ರ ಹಲವು ಅಧ್ಯಯನಗಳು ಒಂದೊಂದಾಗಿ ತಿಳಿದು ಬರುತ್ತಿದೆ. ರೋವರ್ ಪ್ರಗ್ಯಾನ್ ಕಳುಹಿಸಿದ ಅಚ್ಚರಿಯ ಅಂಶಗಳನ್ನು ಇಸ್ರೋ ಹಲವು ಬಾರಿ ಅಧ್ಯಯನ ನಡೆಸಿ ಫಲಿತಾಂಶವನ್ನು ನೀಡುತ್ತಿದೆ.
ಚಂದ್ರ ದಕ್ಷಿಣ ಧ್ರುವದಲ್ಲಿ ಇಳಿದ ಲ್ಯಾಂಡರ್ ವಿಕ್ರಂ, ರೋವರ್ ಪ್ರಗ್ಯಾನ್ ಚಂದ್ರ ಮೇಲೆ ಅಧ್ಯಯನ ನಡೆಸಿದೆ. ಚಂದ್ರನಲ್ಲಿನ ಘನೀಕೃತ ನೀರಿನ ಹುಡುಕಾಟವು ಇಸ್ರೋಗೆ ಹಲವು ಅಚ್ಚರಿಯ ಮಾಹಿತಿಗಳನ್ನು ಒದಗಿಸಿದೆ. ಚಂದ್ರಯಾನ-3ರ ವಿಕ್ರಂ ಲ್ಯಾಂಡರ್ ನಡೆಸಿರುವ ಪ್ರಯೋಗವು ಚಂದ್ರನ ಉಷ್ಣ ಪರಿಸರ, ಮಂಜುಗಡ್ಡೆ ನಿಕ್ಷೇಪಗಳ ಮೇಲೆ ಬೆಳಕು ಚೆಲ್ಲಿದೆ. ಆ ಮೂಲಕ ಅಚ್ಚರಿಯ ವಿದ್ಯಮಾನಗಳು ತಿಳಿದುಬಂದಿದೆ. ಚಂದ್ರನ ಮೇಲ್ಮೈ ತಾಪಮಾನವು
ಚಂದ್ರಾಸ್ ಸರ್ಫೇಸ್ ಥರ್ಮೋಫಿಸಿಕಲ್ ಎಕ್ಸ್ಪೆರಿಮೆಂಟ್(ಚೇಸ್ಟ್) ಎಂಬ ಸಾಧನವು ಚಂದ್ರನ ದಕ್ಷಿಣ ಧ್ರುವ ಪ್ರದೇಶದ ತಾಪಮಾನವನ್ನು ಅಳೆದು 82 ಡಿ.ಸೆ. ಎಂಬುದನ್ನು ಕಂಡುಕೊಂಡಿದೆ. ಇದು ವಿಜ್ಞಾನಿಗಳು ಅಂದುಕೊಂಡದ್ದಕ್ಕಿಂತ ಹಲವು ಪಟ್ಟು ಹೆಚ್ಚು. ಈ ಮೂಲಕ ಚಂದ್ರನ ಮೇಲ್ಮನಲ್ಲಿ ಸಣ್ಣ ಪುಟ್ಟ ಏರಿಳಿತಕ್ಕೂ ತಾಪಮಾನ ಗಣನೀಯ ಬದಲಾವಣೆ ಹೊಂದಿರುತ್ತದೆ ಎನ್ನುವುದು ಸಾಬೀತಾದಂತಾಗಿದೆ. ಚಂದ್ರ, ಮಾನವ ವಾಸ ಯೋಗ್ಯವೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವಲ್ಲೂ ಈ ಅನ್ವೇಷಣೆ ಪ್ರಮುಖ ಎನ್ನಲಾಗಿದೆ.
ಚಂದ್ರನ ಮಣ್ಣಿನಲ್ಲಿರುವ ಉಷ್ಣವಾಹಕತೆ ಕಡಿಮೆಯಿದ್ದು, ಇದು ಹೊದಿಕೆ ರೀತಿ ವರ್ತಿಸುತ್ತದೆ. ಹೀಗಾಗಿ ಚಂದ್ರನ ಮೇಲ್ಕೆ,ನಿಂದ ಕೆಲವೇ ಸೆಂಟಿಮೀಟರ್ಗಳಲ್ಲಿ ತಾಪಮಾನ ವ್ಯತ್ಯಾಸವೂ ಗಮನಾರ್ಹವಾಗಿರುತ್ತದೆ ಎಂದು ಅಳೆಯು ವ ಮೂಲಕ ಚಂದ್ರನ ಮೇಲ್ಮ, ವಾಹಕತೆ ಬಗ್ಗೆ ಚೇಸ್ಟ್ ಸಾಧನ ಮಾಹಿತಿ ನೀಡಿದೆ.