Friday, June 27, 2025

ಪೋಕ್ಸೋ ಪ್ರಕರಣ: ಮದರಸಾ ಶಿಕ್ಷಕನ ಬಂಧನ

ಮಲಪ್ಪುರಂ: ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮದರಸಾ ಶಿಕ್ಷಕನನ್ನು ಬಂಧಿಸಲಾಗಿದೆ. ಬಂಧಿತನನ್ನು ಕುಳಿಕ್ಕಟ್ಟುವಿನ 55 ವರ್ಷದ ಮುಹಮ್ಮದ್ ಅಬ್ದುಲ್ ಸಲೀಂ ಮುಸ್ಲಿಯಾರೆ ಎಂದು ಗುರುತಿಸಲಾಗಿದೆ.

ಮದರಸಾವೊಂದರಲ್ಲಿ ಹತ್ತು ವರ್ಷದ ಬಾಲಕಿಯ ಮೇಲೆ ಸಲೀಂ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಾಲಕಿ ಮನೆಗೆ ಹಿಂದಿರುಗಿದ ನಂತರ ತನ್ನ ಪೋಷಕರಿಗೆ ಈ ಬಗ್ಗೆ ಹೇಳಿದಾಗ ದೌರ್ಜನ್ಯದ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ.

ಪೋಷಕರ ದೂರಿನ ಆಧಾರದ ಮೇಲೆ ವಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಂದೂರು ಸಿಐ ದೀಪಾ ಕುಮಾ‌ರ್ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಪೋಕ್ಸೋ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related Articles

Latest Articles