Friday, June 27, 2025

ಟೆನ್ನಿಸ್ ಬಾಲ್ ಕ್ರಿಕೆಟ್ ಆಡಿದ ಯುಕೆ ಮಾಜಿ ಪ್ರಧಾನಿ ರಿಷಿ ಸುನಕ್

ಯುನೈಟೆಡ್ ಕಿಂಗ್​ಡಮ್​ನ ಮಾಜಿ ಪ್ರಧಾನಿ ಹಾಗೂ ಭಾರತದ ಅಳಿಯ ರಿಷಿ ಸುನಕ್​ ಮುಂಬೈಗೆ ಭೇಟಿ ನೀಡಿ ಪಾರ್ಸಿ ಜಿಮ್​ಖಾನಾದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಆಡಿದ್ದಾರೆ. ಈ ಫೋಟೋವನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿರುವ ರಿಷಿ ಸುನಕ್ ಟೆನ್ನಿಸ್ ಬಾಲ್ ಕ್ರಿಕೆಟ್ ಆಡದೇ ಇದ್ದರೆ ಮುಂಬೈ ಪ್ರವಾಸ ಸಂಪೂರ್ಣ ಆಗುವುದೇ ಇಲ್ಲ ಎಂದು ಬರೆದುಕೊಂಡಿದ್ದಾರೆ.

ಅವರು ಪೋಸ್ಟ್ ಮಾಡಿರುವ ಫೋಟೋದಲ್ಲಿ ಬ್ಯಾಟ್ ಹಿಡಿದುಕೊಂಡು ಅವರು ಬ್ಯಾಟಿಂಗ್​ ಆಡುತ್ತಿದ್ದರು. ಅವರ ಸುತ್ತಲೂ ಅನೇಕ ಜನರು ಸೇರಿಕೊಂಡಿದ್ದರು. ಇಂಗ್ಲೆಂಡ್​ನ ರಾಜಕಾರಣಿ ಕ್ರೀಡೆಯನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದಕ್ಕೆ ಇದು ನಿದರ್ಶನವಾಗಿತ್ತು. ಬಿಳಿ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಬ್ಯಾಂಟ್ ಹಾಕಿಕೊಂಡು ಸ್ಪೋರ್ಟ್ಸ್​ ಧರಿಸಿದ್ದ ರಿಷಿ ಸುನಕ್ ಸ್ಟಫ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಜಿಮ್​ಖಾನಾದ ವಾರ್ಷಿಕೋತ್ಸವಕ್ಕೆ ಆಗಮಿಸಿದ್ದ ರಿಷಿ ಸುನಕ್​ ಇಲ್ಲಿ ಬರುವುದೇ ನಮಗೆ ಒಂದು ಸಂಭ್ರಮ. ಈ ಐತಿಹಾಸಿಕ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಭಾಗಿಯಾಗಿದ್ದು ನಿಜಕ್ಕೂ ಖುಷಿ ನೀಡಿದೆ. ನಿಜಕ್ಕೂ ಇದು ಒಂದು ಅದ್ಭುತ ಇತಿಹಾಸ ಹೊಂದಿರುವ ಸಂಸ್ಥೆ. ಇದು ಇನ್ನಷ್ಟು ಮತ್ತಷ್ಟು ಬೆಳೆಯಲಿ ಎಂದು ಹೇಳಿದ್ದಾರೆ.

Related Articles

Latest Articles