Friday, June 27, 2025

ಮಂಗಳೂರು ವಿಮಾನ ನಿಲ್ದಾಣದಲ್ಲಿ ಒಂದೇ ದಿನ 7,710 ಜನರ ಪ್ರಯಾಣ – ಹೊಸ ದಾಖಲೆ

ಮಂಗಳೂರು: ಬಜಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತೊಂದು ದಾಖಲೆ ಮಾಡಿದೆ. ಒಂದೇ ದಿನ ಏಳು ಸಾವಿರಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತೊಯ್ದಿದೆ.

ಭಾನುವಾರ (ಜ.12) ಒಟ್ಟು 7,710 ಪ್ರಯಾಣಿಕರು ಬಳಸಿದ್ದು, ಇದು ಹೊಸ ದಾಖಲೆಯಾಗಿದೆ. ಈ ವಿಮಾನ ನಿಲ್ದಾಣವು ವಾಣಿಜ್ಯ ಕಾರ್ಯಾಚರಣೆ ಆರಂಭಿಸಿದ ಬಳಿಕ ಒಂದೇ ದಿನದಲ್ಲಿ ನಿರ್ವಹಿಸಿದ ಪ್ರಯಾಣಿಕರ ಗರಿಷ್ಠ ಸಂಖ್ಯೆ ಇದಾಗಿದೆ.

ಭಾನುವಾರ 24 ವಿಮಾನಗಳು ಇಲ್ಲಿ ಇಳಿದಿದ್ದು, 25 ವಿಮಾನಗಳು ಇಲ್ಲಿಂದ ಪ್ರಯಾಣ ಬೆಳೆಸಿವೆ. ಅವುಗಳಲ್ಲಿ 7,613 ಹಿರಿಯರು, 97 ಮಕ್ಕಳು ಪ್ರಯಾಣಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಶನಿವಾರವೂ ಪ್ರಯಾಣಿಕರ ದಟ್ಟಣೆ ಹೆಚ್ಚು ಇತ್ತು. ಅಂದು 48 ವಿಮಾನಗಳು ಹಾರಾಟ ನಡೆಸಿದ್ದು, ಒಟ್ಟು 7,538 ಪ್ರಯಾಣಿಕರು ಅವುಗಳಲ್ಲಿ ಪ್ರಯಾಣಿಸಿದ್ದು ವಿಶೇಷ ‌.

Related Articles

Latest Articles