
ತಮಿಳು ನಟ ವಿಶಾಲ್ ಅವರು ಸಾಕಷ್ಟು ಹೆಸರು ಮಾಡಿದ್ದಾರೆ. ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಅವರು ಮಾಸ್ ಆಗಿ ಗಮನ ಸೆಳೆಯುತ್ತಾರೆ. ಇಂಥ ವಿಶಾಲ್ ಅವರು ಈಗ ಸಖತ್ ಡಲ್ ಆಗಿದ್ದಾರೆ. ಇತ್ತೀಚೆಗೆ ಅವರ ನಟನೆಯ ‘ಮದ ಗಜ ರಾಜ’ ಸಿನಿಮಾದ ಪ್ರೀ ರಿಲೀಸ್ ಈವೆಂಟ್ಗೆ ಆಗಮಿಸಿದ್ದರು. ಆಗ ಅವರ ಕೈ ನಡುಗಿದೆ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಏನಾದರೂ ಖಾಯಿಲೆಗೆ ತುತ್ತಾಗಿದ್ದಾರೆಯೇ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡಿದೆ.

ಚೆನ್ನೈನಲ್ಲಿ ಇತ್ತೀಚೆಗೆ ‘ಮದ ಗಜ ರಾಜ’ ತಂಡದವರು ಅದ್ದೂರಿಯಾಗಿ ಪ್ರೀ-ರಿಲೀಸ್ ಈವೆಂಟ್ ಮಾಡಿದರು. ಈ ಚಿತ್ರಕ್ಕೆ ವಿಶಾಲ್ ಹೀರೋ. ಹೀಗಾಗಿ, ಅವರು ಕೂಡ ವೇದಿಕೆ ಏರಿದ್ದರು. ಅವರು ಮಾತನಾಡುವಾಗ ಕೈ ನಡುಗುತ್ತಿತ್ತು. ಮಾತುಗಳನ್ನಾಡಲು ಕಷ್ಟಪಟ್ಟರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಶಾಲ್ ಅವರು ಮಾತನಾಡುವಾಗ ಮೈಕ್ನ ಗಟ್ಟಿ ಹಿಡಿದು ಮಾತನಾಡುತ್ತಿದ್ದರು. ಅವರ ಮಾತುಗಳು ನೇರವಾಗಿ ಇರುತ್ತಿದ್ದವು. ಆದರೆ, ಮೊದಲಿದ್ದ ವಿಶಾಲ್ ಈಗ ಕಾಣೆ ಆಗಿದ್ದಾರೆ. ಈಗ ಕೇಳಿ ಬರುತ್ತಿರುವ ಸ್ಪಷ್ಟನೆ ಏನೆಂದರೆ ಅವರಿಗೆ ಆ ಸಂದರ್ಭದಲ್ಲಿ ತೀವ್ರ ಜ್ವರ ಇತ್ತು. ಆದಗ್ಯೂ ಅವರು ವೇದಿಕೆ ಏರಿ ಮಾತನಾಡಿದ್ದರು. ಜ್ವರ ಇದ್ದ ಕಾರಣದಿಂದಲೇ ಅವರಿಗೆ ನಡುಕ ಶುರುವಾಗಿತ್ತು ಎನ್ನಲಾಗಿದೆ.