Friday, June 27, 2025

ಜೆಡಿಎಸ್ ಮುಖಂಡನ ಬರ್ಬರ ಹತ್ಯೆ

ಚಿಕ್ಕಬಳ್ಳಾಪುರದ ತಮ್ಮನಾಯಕನಹಳ್ಳಿ ಗೇಟ್​ ಬಳಿ ಲಾಂಗ್​ನಿಂದ ಕೊಚ್ಚಿ ಜೆಡಿಎಸ್ ಮುಖಂಡನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಜೆಡಿಎಸ್​ ಮುಖಂಡ ವೆಂಕಟೇಶ್ ಕೊಲೆಯಾದ ದುರ್ದೈವಿ.

ಕೊಲೆಯಾದ ವೆಂಕಟೇಶ್ ಶುಕ್ರವಾರ (ಜ.03) ರಂದು ಟಿವಿಎಸ್ ಎಲೆಕ್ಟ್ರಿಕ್ ಬೈಕ್‌ನಲ್ಲಿ ತಮ್ಮನಾಯಕನಹಳ್ಳಿ ಗೇಟ್​​ನಿಂದ ಮನೆಗೆ ತೆರಳುತ್ತಿದ್ದರು.

ಈ ವೇಳೆ ದುಷ್ಕರ್ಮಿಗಳು ಬೈಕ್​ ಅಡ್ಡಗಟ್ಟಿ, ಲಾಂಗಿನಿಂದ ಕೊಚ್ಚಿ ವೆಂಕಟೇಶ್​ರನ್ನು​ ಕೊಲೆ ಮಾಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಮತ್ತು ಎಸ್​ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಳೇ ದ್ವೇಷಕ್ಕೆ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

Related Articles

Latest Articles