ಕೋಝಿಕ್ಕೋಡ್: ಚಹಾ ಕುಡಿಯುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದು ಪೊಲೀಸೊಬ್ಬರು ಮೃತಪಟ್ಟಿದ್ದಾರೆ. ಕೋಝಿಕ್ಕೋಡ್ ಕಂಟ್ರೋಲ್ ರೂಂ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ ಪೆರಿಕಿಲಂ ಶಾಜಿ (44) ಸಾವನ್ನಪ್ಪಿದ್ದಾರೆ.
ತಿರುವಂಪಾಡಿ ಪುಲ್ಲೂರಂಪಾರ ಪಲ್ಲಿಪಾಡಿಯಲ್ಲಿ ವಾಲಿಬಾಲ್ ಆಟ ಆಡಿ ಹೊಟೇಲ್ಗೆ ಹೋಗಿದ್ದರು. ಹೋಟೆಲ್ ನಲ್ಲಿ ಟೀ ಕುಡಿಯುತ್ತಿದ್ದಾಗ ಶಾಜಿ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಸಾಗಿಸಿದರೂ, ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾಗಿ ಘೋಷಿಸಿದ್ದಾರೆ.