Friday, June 27, 2025

ಸರ್ಕಾರಿ ಶಾಲಾ ಮಕ್ಕಳ ಹಾಜರಾತಿಗೆ ಇನ್ಮುಂದೆ ಫೇಶಿಯಲ್ ಅಟೆಂಡೆನ್ಸ್

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿಗೆ ಫೇಶಿಯಲ್ ಅಟೆಂಡೆನ್ಸ್ ಪರಿಚಯಿಸಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ. ಶಾಲೆಗೆ ಮಕ್ಕಳನ್ನ ಕಳುಹಿಸದೆ ಚಕ್ಕರ್ ಹಾಕಿಸುವ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಇಲಾಖೆ ಶಾಕ್ ಕೊಟ್ಟಿದೆ. ಈಗಾಗಲೇ ಸಾಪ್ಟವೇರ್ ಕಂಪನಿಗಳ ಜೊತೆ ಮಾತುಕಥೆಯಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಈ ಫೇಸಿಯಲ್ ಸ್ಕ್ರೀನಿಂಗ್ ಅಳವಡಿಸಲು ಇಲಾಖೆ ಮುಂದಾಗಿದೆ.

ಮೊಬೈಲ್ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳ ಫೇಸಿಯಲ್ ಹಾಜರಾತಿ ದಾಖಲಾತಿಗೆ ಇಲಾಖೆ ಮುಂದಾಗಿದೆ. ಇದರಿಂದ ಮಕ್ಕಳ ಶಾಲಾ ಹಾಜರಾತಿ ನೇರವಾಗಿ ಇಲಾಖೆಯ ಸ್ಟ್ಯಾಟ್ಸ್ ಗೆ ದಾಖಲಾಗುತ್ತದೆ. ಈ ಮೂಲಕ ಪ್ರತಿದಿನದ ವಿದ್ಯಾರ್ಥಿಗಳ ದಾಖಲಾತಿ ಹಾಗೂ ಎಷ್ಟು ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಎಷ್ಟು ಗೈರು ಹಾಜರಾತಿ ಎಂಬ ಕಂಪ್ಲೀಟ್ ಮಾಹಿತಿ ಇಲಾಖೆಗೆ ತಿಳಿಯಲಿದೆ.

ಕಡ್ಡಾಯ ಹಾಜರಾತಿ ಕಡಿಮೆ ಇರುವ ಮಗುವಿಗೆ ಪರೀಕ್ಷೆಗೆ ಹಾಜರಾತಿ ವಿನಾಯತಿ ಕಡಿತದ ಬಗ್ಗೆಯೂ ಚಿತಂನೆ ಮಾಡಿದೆ. ಒಟ್ಟಿನಲ್ಲಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಹಾಗೂ ಶಾಲೆಯಿಂದ ಹೊರಗಡೆ ಉಳಿಯುವ ಮಕ್ಕಳ ಸಂಖ್ಯೆ ಕಡಿಮೆ ಮಾಡಲು ಜೊತೆಗೆ ಹಾಜರಾತಿ ಹೆಚ್ಚಿಸಲು ಶಾಲಾ ಶಿಕ್ಷಣ ಇಲಾಖೆ ಈ ಪ್ಲ್ಯಾನ್ ಮಾಡಿದೆ.

Related Articles

Latest Articles