Saturday, June 28, 2025

ಮಂಗಳೂರು: ಪಬ್‌ಜಿ ಆಟದ ಅಭ್ಯಾಸವಿದ್ದ ಯುವತಿ ನಾಪತ್ತೆ

ಮಂಗಳೂರು: ಮೊಬೈಲ್‌ನಲ್ಲಿ ಪಬ್‌ಜಿ ಆಟವಾಡುವ ಹವ್ಯಾಸವಿದ್ದ ಬಿಜೈಯ ಯುವತಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

ಕೆಲಿಸ್ತಾ ಫೆರಾವೊ (18) ನಾಪತ್ತೆಯಾದ ಯುವತಿ. ಇವರು ಎಸೆಸೆಲ್ಸಿ ಬಳಿಕ ಆಟೊಮೊಬೈಲ್‌ ಕೋರ್ಸ್‌ಗೆ ಸೇರ್ಪಡೆಗೊಂಡಿದ್ದರು. ಈಕೆ ಮಂಗಳವಾರ ಮಧ್ಯಾಹ್ನ 12.15ರ ಸುಮಾರಿಗೆ ಮನೆಯಿಂದ ಹೊರಗೆ ಹೋಗಿದ್ದರು‌.‌ ಇದು ಮನೆಯವರ ಗಮನಕ್ಕೆ ಬಂದ ಕೂಡಲೇ ಅವರು ಹುಡುಕಾಟ ಆರಂಭಿಸಿದರು. ಸಿಸಿ ಕೆಮರಾವೊಂದನ್ನು ಪರಿಶೀಲಿಸಿದಾಗ ಈಕೆ ಆಟೋರಿಕ್ಷಾದಲ್ಲಿ ಹೋಗುತ್ತಿರುವ ದೃಶ್ಯ ದಾಖಲಾಗಿತ್ತು.

ಕೆಲಿಸ್ತಾ ಕನ್ನಡ, ತುಳು, ಇಂಗ್ಲಿಷ್‌, ಕೊಂಕಣಿ ಭಾಷೆಗಳನ್ನು ಮಾತನಾಡುತ್ತಾಳೆ. ಬಿಳಿ ಟಾಪ್‌ ಮತ್ತು ನೀಲಿ ಜೀನ್ಸ್‌ ಪ್ಯಾಂಟ್‌ ಧರಿಸಿದ್ದಳು. ಮಾಹಿತಿ ದೊರೆತವರು ಬರ್ಕೆ ಪೊಲೀಸ್‌ ಠಾಣೆ (0824-2220522) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

ಈಕೆಗೆ ಪಬ್‌ಜೀ ಗೇಮ್‌ನ ಅಭ್ಯಾಸವಿತ್ತು. ಈಕೆ 9ನೇ ತರಗತಿಯಲ್ಲಿದ್ದಾಗಲೂ ಪಬ್‌ಜಿ ಆಡುತ್ತಿದ್ದಳು. ನಂತರ ಪಬ್ ಜಿ ಆಟ ಆಡುವುದು ಗೀಳಾಗಿ ಪರಿಣಮಿಸಿದೆ. ಇದರಿಂದ ಮನೆಯಲ್ಲಿ ಈ ಹಿಂದೆ ಜಗಳವೂ ಆಗಿತ್ತು ಎನ್ನಲಾಗಿದೆ.

Related Articles

Latest Articles