Friday, June 27, 2025

IND vs PAK ಪಂದ್ಯಕ್ಕೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​​.. ಜಸ್ಟ್​ 10 ಸೆಕೆಂಡ್ಸ್ ಜಾಹೀರಾತಿಗೆ ಅರ್ಧ ಕೋಟಿ..! ಗಗನ ಕುಸುಮವಾದ ಟಿಕೆಟ್

ಇಂಡೋ-ಪಾಕ್​​ ಪಂದ್ಯ ಅಂದ್ರೆ ಬರಿ ಕಣ್ಣಿಗಷ್ಟೇ ಹಬ್ಬ ಅಲ್ಲ. ಪ್ರಸಾರ ವಾಹಿನಿಗೂ ದೊಡ್ಡ ಹಬ್ಬ. ಬದ್ಧವೈರಿಗಳ ಕಾದಾಟದಿಂದ ಸ್ಟಾರ್ ಇಂಡಿಯಾ ವಾಹಿನಿ ನಸೀಬು ತೆರೆದಿದೆ.

ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸರಣಿ ಆಡದೇ ದಶಕಗಳೇ ಕಳೆದಿವೆ. ಜೂನ್​​ 9 ರಂದು ಸಾಂಪ್ರದಾಯಿಕ ಎದುರಾಳಿಗಳು ಕಾದಾಡಲಿದ್ದು ಮೆಗಾ ಬ್ಯಾಟಲ್​ಗೆ ಇನ್ನಿಲ್ಲದ ಡಿಮ್ಯಾಂಡ್ ಕುದುರಿದೆ.

ಇಂಡೋ-ಪಾಕ್​​ ನೋಡುಗರಿಗೆ ಇನ್ನಿಲ್ಲದ ಮನರಂಜನೆ ನೀಡುತ್ತೆ ನಿಜ. ಆದ್ರೆ ಪಂದ್ಯಾವಳಿ ಆಯೋಜಿಸುವ ಐಸಿಸಿ ಹಾಗೂ ಸ್ಟಾರ್ ವಾಹಿನಿ ಈ ಪಂದ್ಯದಿಂದ ಕೋಟಿ ಕೋಟಿ ಹಣ ಜೇಬಿಗಿಳಿಸುತ್ತೆ. ಭಾನುವಾರ ನಡೆಯುವ ಬಿಗ್​​ ಗೇಮ್​​​ನಿಂದ ಸ್ಟಾರ್​ ಇಂಡಿಯಾ ವಾಹಿನಿಗೆ ಬಂಪರ್​ ಜಾಕ್​ಪಾಟ್​​​ ಹೊಡೆದಿದ್ದು, ಸೆಕೆಂಡ್ಸ್​ಗೆ ಲಕ್ಷ ಲಕ್ಷ ಹಣ ಜೇಬಿಗಿಳಿಸಿಕೊಳ್ತಿದೆ.

ಭಾರತ-ಪಾಕ್​ ಪಂದ್ಯ ಅಂದ್ರೆ ಪ್ರಸಾರ ವಾಹಿನಿಗಳಿಗೆ ದೊಡ್ಡ ಹಬ್ಬ. ಈ ಒಂದೇ ಒಂದು ಪಂದ್ಯದಿಂದ ನೂರಾನೂರು ಕೋಟಿ ರೂಪಾಯಿ ಗಳಿಸ್ತಾರೆ. ಈ ಸಲವು ಅದರಿಂದ ಹಿಂದೆ ಬಿದ್ದಿಲ್ಲ. ಕಳೆದ ಬಾರಿಗೆ ಹೋಲಿಸಿದ್ರೆ ಜಾಹೀರಾತಿನ ದರ 22-25% ಹೆಚ್ಚಾಗಿದೆ. ಪಂದ್ಯ ಪ್ರಸಾರದ ಟಿವಿ ಹಕ್ಕು ಪಡೆದಿರೋ ಸ್ಟಾರ್ ಸ್ಪೋರ್ಟ್ಸ್​​ ವಾಹಿನಿ ಆ ದಿನ 10 ಸೆಕೆಂಡ್ಸ್​ ಜಾಹೀರಾತಿಗೆ ಬರೋಬ್ಬರಿ 50 ಲಕ್ಷ ರೂಪಾಯಿ ಗಳಿಸಲಿದೆ. ಈಗಾಗ್ಲೇ ಈ ಮ್ಯಾಚ್​ನ ಶೇಕಡಾ 90 ರಷ್ಟು ಜಾಹೀರಾತು ಫುಲ್​ ಆಗಿದೆ.

ಬರೀ ಅಡ್ವರ್​​ಟೈಸ್​ಮೆಂಟ್​ ಅಲ್ಲ ಇಂಡೋ-ಪಾಕ್​​ ಪಂದ್ಯದ ಟಿಕೆಟ್ ದರವು ಗಗನಕುಸುಮವಾಗಿದೆ. ನಸೌ ಕೌಂಟಿ ಸ್ಟೇಡಿಯಂನಲ್ಲಿ 3 ಬಗೆಯ ಟಿಕೆಟ್​ ಪ್ಯಾಕೇಜ್ ಇದ್ದು, ಒಂದೊಂದರ ಬೆಲೆ ಲಕ್ಷ ಲಕ್ಷ ಮೀರಿದೆ. ಡೈಮಂಡ್ ಕ್ಲಬ್ ಟಿಕೆಟ್ ಬೆಲೆ ​ 8,34,323 ರೂ ಆದ್ರೆ ಪ್ರೀಮಿಯಮ್ ಕ್ಲಬ್​ 2,08,585 ಹಾಗೂ ಕಾರ್ನರ್​​​​​ ಕ್ಲಬ್ ಗರಿಷ್ಠ ಬೆಲೆ 15 ಲಕ್ಷದ 2 ಸಾವಿರ ರೂಪಾಯಿ ಆಗಿದೆ. ಲಕ್ಷ ಲಕ್ಷ ಕೊಟ್ರೂ ಟಿಕೆಟ್​​ಗೆ ಡಿಮ್ಯಾಂಡ್ ಮಾತ್ರ ತಪ್ಪಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ಟಿಕೆಟ್ ಬೆಲೆ ಕೋಟಿ ಆದ್ರೂ, ಅಚ್ಚರಿ ಪಡಬೇಕಿಲ್ಲ.!

Related Articles

Latest Articles