Friday, June 27, 2025

ಉಡುಪಿಯಲ್ಲಿ ಪ್ರಜ್ವಲ್ ರೇವಣ್ಣ ಮಾದರಿ ಪ್ರಕರಣ: ಆರೋಪಿ ಶ್ರೇಯಸ್ ನಾಯ್ಕ್ ಎಸ್ಕೇಪ್‌..! ರೆಕಾರ್ಡ್ ಮಾಡಿ ನಿರಂತರ ಅತ್ಯಾಚಾರ

ಉಡುಪಿ: ಪ್ರಜ್ವಲ್ ರೇವಣ್ಣ ಮಾದರಿಯದ್ದೇ ಲೈಂಗಿಕ ದೌರ್ಜನ್ಯ ನಡೆಸಿ ವೀಡಿಯೋ ಮಾಡಿಕೊಳ್ಳುತ್ತಿದ್ದ ಘಟನೆ ನಡೆದಿದೆ. ಸದ್ಯ ವಿಕೃತ ಕಾಮಿಯೊಬ್ಬನನ್ನು ಪೊಲೀಸರು ಬಂಧಿಸಲು ಹರಸಾಹಸ ಪಡುತ್ತಿದ್ದಾರೆ.

ಅಮಾಸೆಬೈಲಿನ ಉದ್ಯಮಿ ಶ್ರೇಯಸ್ ನಾಯ್ಕ (25) ಮೇಲೆ ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಶ್ರೇಯಸ್‌ ನ ಬಂಧನಕ್ಕೆ ವಿಶೇಷ ತನಿಖಾ ತಂಡ ರಚನೆಯಾಗಿದ್ದು, ಮೇ 18 ರಂದು ದಾಖಲಾಗಿದ್ದ ಪೋಕ್ಸೋ ಪ್ರಕರಣ ಬಾಲಕಿಯೊಬ್ಬಳ ಮೇಲೆ ಒಂದು ವರ್ಷದಿಂದ ನಿರಂತರ ಅತ್ಯಾಚಾರ ಎಸಗುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಾಲಾಡಿ ರಸ್ತೆ ಹೆಗ್ಗೋಡ್ಲುವಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಾರಿನಲ್ಲಿ ಅತ್ಯಾಚಾರದ ಎಸಗಿದ್ದ. ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಣ‌ ಮಾಡಿ ಪದೇ ಪದೇ ಅತ್ಯಾಚಾರ ಎಸಗಿದ್ದಾಗಿ ದೂರಿನಲ್ಲಿ‌ ತಿಳಿಸಿದ್ದಾರೆ. ನಿರಂತರ ಅತ್ಯಾಚಾರದ ಪರಿಣಾಮ ಸಂತ್ರಸ್ಥೆ ಗರ್ಭಾವತಿ ಆಗಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ಸದ್ಯ ತಲೆಮರೆಸಿಕೊಂಡಿರುವ ಶ್ರೇಯಸ್ ಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ.
ಇದೇ ರೀತಿ ಹಲವು ಯುವತಿಯರಿಗೆ ಪುಸಲಾಯಿಸಿ ಲೈಂಗಿಕ ದೌರ್ಜನ್ಯ ನಡೆಸಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ಬೆದರಿಸುತ್ತಿದ್ದ ಎನ್ನುವ ದೂರುಗಳು ಕೇಳಿ ಬಂದಿವೆ. ಅಷ್ಟಲ್ಲದೇ ಲಾಪ್‌ಟಾಪ್‌ನಲ್ಲಿ ವಿಡಿಯೋ ಇಟ್ಟುಕೊಂಡಿದ್ದಾಗಿಯೂ ವರದಿಯಾಗಿದೆ‌

ಪೊಲೀಸರೇ ವಿಡಿಯೋ ಡಿಲಿಟ್ ಮಾಡಿದರೇ….?
ಆರೋಪಿಗೆ ಇಬ್ಬರು ಹತ್ತಿರದ ಸಂಬಂಧಿಗಳು ಪೊಲೀಸ್ ಇಲಾಖೆಯಲ್ಲಿ ಇದ್ದು, ದೌರ್ಜನ್ಯ ಪ್ರಕರಣ ದಾಖಲಾಗುತ್ತಿದ್ದಂತೆ, ಅಮಾಸೆಬೈಲ್‌ನ ಸೆನ್ ಪೊಲೀಸರ ಮುಖಾಂತರ ಯಾವುದೇ ಸರ್ಜ್ ವಾರಾಂಟ್ ಇಲ್ಲದೆ ಆರೋಪಿ ಮನೆಗೆ ಹೋದ ಪೇದೆಯೊರ್ವ ಆರೋಪಿಯ ಲ್ಯಾಪ್‌ಟಾಪ್‌ನಲ್ಲಿದ್ದ ವಿಡಿಯೋಗಳನ್ನು ಡಿಲೀಟ್ ಮಾಡಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿದ್ದಾಗಿ ಉಡುಪಿ ಟೈಮ್ಸ್ ವರದಿ ಮಾಡಿದೆ.

Related Articles

Latest Articles