Friday, July 4, 2025

ಕೆಜಿಎಫ್​ 3 ಬರುತ್ತೆ, ಸ್ಕ್ರಿಪ್ಟ್​ ಸಿದ್ಧವಾಗಿದೆ: ಬಿಗ್ ಅಪ್​ಡೇಟ್​ ಕೊಟ್ಟ ಪ್ರಶಾಂತ್​ ನೀಲ್

ಹೊಂಬಾಳೆ ಫಿಲ್ಮ್ಸ್​ ಬ್ಯಾನರ್‌ನಡಿಯಲ್ಲಿ ನಿರ್ಮಾಣವಾದ ‘ಕೆಜಿಎಫ್​: ಚಾಪ್ಟರ್​ 1’ ಹಾಗೂ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾಗಳು ಕನ್ನಡ ಚಿತ್ರರಂಗಕ್ಕೆ ಹೊಸ ಮೆರುಗು ತಂದುಕೊಟ್ಟವು. ಈ ಸಿನಿಮಾಗಳಿಗೆ ನಿರ್ದೇಶನ ಮಾಡಿದ ಪ್ರಶಾಂತ್​ ನೀಲ್​ ಅವರ ಖ್ಯಾತಿ ದೇಶಾದ್ಯಂತ ಹಬ್ಬಿತು. ನಟ ಯಶ್​ ಅವರು ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಹೊರಹೊಮ್ಮಿದರು. ಈಗ ‘ಕೆಜಿಎಫ್​ 3’ ಸಿನಿಮಾ ಬಗ್ಗೆ ಒಂದು ಅಪ್​ಡೇಟ್​ ಸಿಕ್ಕಿದೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಶಾಂತ್​ ನೀಲ್​ ಅವರು ಈ ಬಗ್ಗೆ ಮಾತನಾಡಿದ್ದಾರೆ. ಆ ಕುರಿತು ಪಿಂಕ್​ವಿಲ್ಲಾ ವರದಿ ಪ್ರಕಟ ಮಾಡಿದೆ.

‘ಕೆಜಿಎಫ್​ 3 ಸಿನಿಮಾ ಖಂಡಿತಾ ಆಗುತ್ತದೆ. ಅದರ ಸ್ಕ್ರಿಪ್ಟ್​ ಮಾಡಲಾಗಿದೆ. ಸ್ಕ್ರಿಪ್ಟ್​ ಬರೆದಿರಲಿಲ್ಲ ಎಂದಿದ್ದರೆ ಕೆಜಿಎಫ್​ 2ನಲ್ಲಿ ಅದನ್ನು ಹಾಕುತ್ತಿರಲಿಲ್ಲ. ನಾವು ಕೆಜಿಎಫ್​ ಪಾರ್ಟ್​ 3 ಮಾಡುತ್ತೇವೆ ಎಂಬುದು ಕೊನೆಗೆ ಎಲ್ಲರಿಗೂ ತಿಳಿದಿತ್ತು’ ಎಂದು ಪ್ರಶಾಂತ್​ ನೀಲ್​ ಹೇಳಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 1’ ಹಾಗೂ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾಗಳು ಸೂಪರ್​ ಹಿಟ್​ ಆಗಿದ್ದರಿಂದ 3ನೇ ಪಾರ್ಟ್​ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ.

{“remix_data”:[],”remix_entry_point”:”challenges”,”source_tags”:[],”origin”:”unknown”,”total_draw_time”:0,”total_draw_actions”:0,”layers_used”:0,”brushes_used”:0,”photos_added”:0,”total_editor_actions”:{},”tools_used”:{“transform”:1,”effects”:1,”selection”:1},”is_sticker”:false,”edited_since_last_sticker_save”:true,”containsFTESticker”:false}

ಅಷ್ಟಕ್ಕೂ ‘ಕೆಜಿಎಫ್​ 3’ ಸಿನಿಮಾ ಸೆಟ್ಟೇರುವುದು ಯಾವಾಗ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಈಗ ಪ್ರಶಾಂತ್​ ನೀಲ್ ಅವರು ‘ಸಲಾರ್​ 2’ ಸಿನಿಮಾದ ಕೆಲಸಗಳತ್ತ ಗಮನ ಹರಿಸಿದ್ದಾರೆ. ‘ರಾಕಿಂಗ್​ ಸ್ಟಾರ್​’ ಯಶ್​ ಅವರು ‘ಟಾಕ್ಸಿಕ್​’ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ನಿರ್ಮಾಣ ಸಂಸ್ಥೆಯಾದ ‘ಹೊಂಬಾಳೆ ಫಿಲ್ಮ್ಸ್​’ ಕೂಡ ಹಲವು ಪ್ರಾಜೆಕ್ಟ್​ಗಳಲ್ಲಿ ತೊಡಗಿಕೊಂಡಿದೆ. ಸೂಕ್ತ ಸಮಯಲ್ಲಿ ಈ ಮೂವರೂ ಒಂದಾಗಬೇಕಿದೆ.

ಪ್ರಶಾಂತ್​ ನೀಲ್​ ಅವರಿಗೆ ಪರಭಾಷೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ‘ಸಲಾರ್​ 2’ ಮುಗಿದ ಬಳಿಕ ಅವರು ಜೂನಿಯರ್​ ಎನ್​ಟಿಆರ್​ ಜೊತೆಗೆ ಸಿನಿಮಾ ಮಾಡಬೇಕಿದೆ. ಇತ್ತೀಚೆಗೆ ಅವರು ವಿಜಯ್​ ದೇವರಕೊಂಡ ನಿವಾಸಕ್ಕೆ ಭೇಟಿ ನೀಡಿದ್ದರು. ಆ ಭೇಟಿಯ ಉದ್ದೇಶ ಏನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಹೊಸ ಸಿನಿಮಾ ಕುರಿತು ಮಾತುಕತೆ ಮಾಡಲು ಅವರು ಅಲ್ಲಿಗೆ ಹೋಗಿರಬಹುದು ಎಂದು ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ.

Related Articles

Latest Articles