Monday, December 9, 2024

ಇಸ್ಪೀಟ್‌ ಅಡ್ಡಕ್ಕೆ ಪೊಲೀಸ್ ದಾಳಿ; ತಪ್ಪಿಸಿಕೊಳ್ಳಲು ತೆಪ್ಪದಲ್ಲಿ ಹೊರಟ ಆರು ಮಂದಿ ನೀರಲ್ಲಿ ಮುಳುಗಿ ಮೃತ್ಯು

ವಿಜಯಪುರ: ತೆಪ್ಪ ಮಗುಚಿ 6 ಜನರು ನೀರುಪಾಲಾಗಿರುವ ಘಟನೆ ಕೊಲ್ಹಾರ ತಾಲೂಕಿನ ಬಳೂತಿ ಜಾಕವೆಲ್ ಬಳಿಯ ಕೃಷ್ಣಾ ನದಿಯಲ್ಲಿ ನಡೆದಿದೆ. ಜೋರಾಗಿ ಬೀಸಿದ ಗಾಳಿಗೆ ತೆಪ್ಪ ನದಿಯಲ್ಲಿ ಮುಗುಚಿ ಬಿದ್ದಿದೆ. ಪರಿಣಾಮ ಆರು ಜನರು ಮೃತರಾಗಿದ್ದು, ಇನ್ನಿಬ್ಬರು ಈಜಿಕೊಂಡು ಹೋಗಿ ದಡ ಸೇರಿದ್ದಾರೆ.

ಕೃಷ್ಣ ನದಿ ತಟದಲ್ಲಿ ಗುಂಪೊಂದು ಇಸ್ಪೀಟ್ ಆಟವಾಡುತ್ತಿತ್ತು. ಸ್ಥಳಕ್ಕೆ ಪೊಲೀಸರು ಬರುತ್ತಿದ್ದಾರೆಂಬ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಯದಿಂದ ತಪ್ಪಿಸಿಕೊಳ್ಳಲು ತೆಪ್ಪದ ಮೂಲಕ ನದಿಯ ನಡುಗಡ್ಡೆಯತ್ತ ಹೊರಟ್ಟಿದ್ದಾರೆ. ದುರದೃಷ್ಟವಶಾತ್ ಜೋರಾಗಿ ಬೀಸಿದ ಗಾಳಿಗೆ ತೆಪ್ಪ ನಡು ನದಿಯಲ್ಲೇ ಮುಗುಚಿ ಬಿದ್ದಿದೆ. ಪರಿಣಾಮ ಇಬ್ಬರು ಈಜಿಕೊಂಡು ದಡ ಸೇರಿದ್ದರೆ, ಇನ್ನೂ ಆರು ಜನರು ಜಲಸಮಾಧಿಯಾಗಿದ್ದಾರೆ.

ಸ್ಥಳಕ್ಕೆ ಕೊಲ್ಹಾರ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಮೃತದೇಹಗಳಿಗಾಗಿ ಹುಡುಕಾಟ ನಡೆಸಿದ್ದು, ಸದ್ಯದ ಮಾಹಿತಿ ಪ್ರಕಾರ ಇಬ್ಬರ ಶವ ಹೊರ ತೆಗೆದಿದ್ದಾರೆ. ಇನ್ನುಳಿದವರ ಮೃದೇಹಗಳಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಎಸ್‌ಪಿ ಋಷಿಕೇಶ ಸೋನಾವಣೆ, ಎಎಸ್ಪಿ ಶಂಕರ ಮಾರಿಹಾರ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

Related Articles

Latest Articles