Saturday, January 25, 2025

350 ಅಡಿ ಆಳದ ಕಮರಿಗೆ ಬಿದ್ದ ಸೇನಾ ವಾಹನ, 5 ಸೈನಿಕರು ಹುತಾತ್ಮ!

  • ಜಮ್ಮು ಮತ್ತು ಕಾಶ್ಮೀರದ ಪೂಂಚ್​​ ಜಿಲ್ಲೆಯಲ್ಲಿ ಅಪಘಾತ
  • ರಸ್ತೆಯಿಂದ ಸ್ಕಿಡ್ ಆಗಿ ಕಂದಕಕ್ಕೆ ಉರುಳಿದ ಸೇನಾ ವಾಹನ
  • ದುರ್ಘಟನೆಯಲ್ಲಿ 5 ಯೋಧರು ಸಾವು, ಹಲವರು ಗಂಭೀರ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧಾರ್‌ನ ಬಲ್ನೋಯಿ ಪ್ರದೇಶದಲ್ಲಿ ಡಿ. ೨೪ರಂದು ಸೇನಾ ವಾಹನವೊಂದು ಕಮರಿಗೆ ಉರುಳಿದ ಪರಿಣಾಮ ಐವರು ಯೋಧರು ಸಾವನ್ನಪ್ಪಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

11 ಮದ್ರಾಸ್ ಲೈಟ್ ಇನ್‌ಫೆಂಟ್ರಿ (11 ಎಂಎಲ್‌ಐ) ಗೆ ಸೇರಿದ ವಾಹನವು ನಿಲಂ ಪ್ರಧಾನ ಕಛೇರಿಯಿಂದ ಬಲ್ನೋಯಿ ಘೋರಾ ಪೋಸ್ಟ್‌ಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ವರದಿಗಳ ಪ್ರಕಾರ, ವಾಹನವು ತನ್ನ ಗಮ್ಯಸ್ಥಾನದ ಸಮೀಪವಿರುವ ಕಡಿದಾದ ಕಮರಿಗೆ ಸುಮಾರು 350 ಅಡಿಗಳಷ್ಟು ಆಳಕ್ಕೆ ಕುಸಿದುಬಿದ್ದಿದೆ. ಮಾಹಿತಿ ಪಡೆದ ತಕ್ಷಣ 11 ಎಂಎಲ್‌ಐನ ಕ್ವಿಕ್ ರಿಯಾಕ್ಷನ್ ತಂಡವು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲು ಸ್ಥಳಕ್ಕೆ ಧಾವಿಸಿತು. ಗಾಯಗೊಂಡ ಸಿಬ್ಬಂದಿಗೆ ತಕ್ಷಣದ ವೈದ್ಯಕೀಯ ನೆರವು ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಸ್ಥಳಾಂತರಿಸುವ ಪ್ರಯತ್ನಗಳು ನಡೆಯುತ್ತಿವೆ.

Related Articles

Latest Articles