Saturday, November 9, 2024

ಜಸ್ಟ್ 300 ರೂ. ಆಭರಣ ಬರೋಬ್ಬರಿ 6 ಕೋಟಿಗೆ ಮಾರಾಟ..!

ಜಸ್ಟ್​​ 300 ರೂಪಾಯಿಗೆ ಬೆಲೆ ಬಾಳುವ ಸರವನ್ನು ಬರೋಬ್ಬರಿ 6 ಕೋಟಿ ರೂಪಾಯಿಗೆ ಮಾರಾಟ ಮಾಡಿ ಮಹಿಳೆಗೆ ವಂಚನೆ ಮಾಡಲಾಗಿದೆ. ಆದರೆ ಈ ವಂಚನೆ ಹಿಂದೆ ಅಪ್ಪ-ಮಗ ಮಾಡಿರೋ ಖತರ್ನಾಕ್​ ಪ್ಲಾನ್​​ ರಿವೀಲ್ ಆಗಿದೆ.

ಅಮೆರಿಕಾದ ಮೂಲದ ಚೆರಿಶ್ ಎಂಬಾಕೆ ಭಾರತಕ್ಕೆ ಬಂದಾಗ ತಮಗಿಷ್ಟವಾದ ಒಡವೆಯನ್ನ ಚಿನ್ನದ ಅಂಗಡಿಯೊಂದರಲ್ಲಿ ಬರೋಬ್ಬರಿ 6 ಕೋಟಿ ಹಣ ಕೊಟ್ಟು ಖರೀದಿ​ ಮಾಡಿರುತ್ತಾರೆ. ಬಳಿಕ ತಾನೂ ಖರೀದಿಸಿದ ಒಡವೆ ಅಸಲಿ ಅಲ್ಲ, ಬದಲಾಗಿ ಅದು ನಕಲಿ ಅಂತ ಗೊತ್ತಾಗಿದೆ.

ಹೀಗೆ ವಂಚನೆಗೊಳಗಾಗಿರೋ ಮಹಿಳೆ ಜೈಪುರದಲ್ಲಿ ಚೆರಿಶ್ ಗೋಪಾಲ್‌ಜೀ ರಸ್ತೆಯ ರಾಮ ರೋಡಿಯಂ ಅಂಗಡಿಗೆ ಹೋಗಿದ್ದರು. ಈ ವೇಳೆ ಅವರಿಗೆ ಅಂಗಡಿಯವರು ಹಾಲ್‌ಮಾರ್ಕ್ ಒಡವೆ ಅಂತ ನಂಬಿಸಿ ಆಕೆ ಇಷ್ಟ ಪಟ್ಟಿದ್ದ ಪೆಂಡೆಂಟ್​ ಹಾಗೂ ಚೈನ್​ ಕೊಟ್ಟಿದ್ರು. ಇದಕ್ಕೆ ಸರ್ಟಿಫಿಕೇಟ್​ ಕೂಡ ಕೊಟ್ಟಿದ್ದಾರೆ.

ಆದರೆ ಅದು ಅಸಲಿಗೆ ನಕಲಿಯಾಗಿರುತ್ತದೆ. ಬೆಳ್ಳಿ ಚೈನ್​ಗೆ ಚಿನ್ನದ ಪಾಲಿಶ್​ ಹಾಕಿ ಮೋಸ ಮಾಡಿದ್ದಾರೆ. ಭಾರತದಲ್ಲಿ ಖರೀದಿ​ ಮಾಡಿದ್ದ ಚೈನ್​​​ ಅನ್ನ ಚೆರಿಶ್​ ಅಮೆರಿಕಾದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ವೇಳೆ ತಾನೂ ಖರೀದಿಸಿದ ಚೈನ್ ನಕಲಿ ಅನ್ನುವುದು ಗೊತ್ತಾಗಿದೆ. ಯಾವಾಗ ಗೋಲ್ಡ್‌ ಚೈನ್ ಫೇಕ್​ ಅನ್ನೋದು ಗೊತ್ತಾಯ್ತೋ ಆಗ ಮಹಿಳೆ ಚೆರಿಶ್​ ಅಂಗಡಿ ಮಾಲೀಕ ರಾಜೇಂದ್ರ ಮತ್ತು ಮಗ ಗೌರವ್ ಸೋನಿ ವಿರುದ್ಧ ಅಮೆರಿಕ ರಾಯಭಾರ ಕಚೇರಿಗೆ ದೂರು ನೀಡಿದ್ದಾರೆ. ಸದ್ಯ ಅಂಗಡಿ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

Related Articles

Latest Articles