ಮಾಸ್ಕೋ: ತನ್ನ ಸ್ವಂತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ತಂದೆಗೆ ಮಾಸ್ಕೋ ನ್ಯಾಯಾಲಯವು 21 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
65 ವರ್ಷದ ಯುಎಸ್ ಪ್ರಜೆ ಡೇವಿಡ್ ಥಾಮಸ್ ಬಾರ್ನ್ಸ್ (David Thomas Barnes) ಎಂಬುವವರು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುತ್ತಿದ್ದಾಗ ಅವರ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಾಸ್ಕೋ ನ್ಯಾಯಾಲಯವು 21 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾಗ ಅವರನ್ನು ಲೈಂಗಿಕವಾಗಿ ನಿಂದಿಸಿದ್ದಾರೆ ಎಂದು ಡೇವಿಡ್ ಥಾಮಸ್ ಬಾರ್ನ್ಸ್ ಅವರ ಮಾಜಿ ಪತ್ನಿ ಆರೋಪಿಸಿದ್ದರು. ರಷ್ಯಾದ ಉಕ್ರೇನ್ ಯುದ್ಧ ನಡೆಯುವ ಒಂದು ವಾರದ ಮೊದಲು ಆರೋಪಿಯನ್ನು ಮಾಸ್ಕೋದಲ್ಲಿ ಬಂಧಿಸಲಾಯಿತು. ಸದ್ಯ ಈಗ ಮಾಸ್ಕೋ ನ್ಯಾಯಾಲಯವು 21 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.