Monday, October 14, 2024

ಯುಕೆಗೆ ಕದ್ದು ಸಾಗಿಸಲಾಗಿದ್ದ 2 ವಿಗ್ರಹಗಳು ಮತ್ತೆ ತಾಯ್ನಾಡಿಗೆ..!

ಭಾರತದಿಂದ ಕದ್ದ ಮತ್ತು ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ಪತ್ತೆಯಾದ 8ನೇ ಶತಮಾನದ ಎರಡು ದೇವಾಲಯಗಳ ವಿಗ್ರಹಗಳನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್ ಬುಧವಾರ ಹಿಂದಿರುಗಿಸುವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಆ ಮೂಲಕ ಮತ್ತೆರಡು ವಿಗ್ರಹಗಳು ತವರಿಗೆ ಬರಲಿದೆ.

ಯೋಗಿನಿ ಚಾಮುಂಡಾ ಮತ್ತು ಯೋಗಿನಿ ಗೋಮುಖಿ ವಿಗ್ರಹಗಳನ್ನು 1970 ಮತ್ತು 1980 ಆರಂಭದ ನಡುವೆ ಉತ್ತರ ಪ್ರದೇಶದ ಲೋಕಾರಿಯ ದೇವಸ್ಥಾನದಿಂದ ಕಳವು ಮಾಡಲಾಗಿತ್ತು.

ಲಂಡನ್‌ನಲ್ಲಿರುವ ಭಾರತದ ಹೈ ಕಮಿಷನ್ ಇಂಡಿಯಾ ಪ್ರೈಡ್ ಪ್ರಾಜೆಕ್ಟ್ ಮತ್ತು ಆರ್ಟ್ ರಿಕವರಿ ಇಂಟರ್‌ನ್ಯಾಶನಲ್‌ನ ಬೆಂಬಲದೊಂದಿಗೆ ವಿಗ್ರಹಗಳು ಮತ್ತೆ ಭಾರತದ ಪಾಲಾಗಿದೆ.

ಜೈಶಂಕರ್ ಅವರು ತಮ್ಮ ಐದು ದಿನಗಳ ಯುಕೆ ಭೇಟಿಯ ಅಂತಿಮ ದಿನದಂದು ಇಂಡಿಯಾ ಹೌಸ್‌ನಲ್ಲಿ ವಿಗ್ರಹಗಳನ್ನು ಅನಾವರಣಗೊಳಿಸಿದರು. ಮತ್ತು ಅವರು ತಮ್ಮ ತಾಯ್ನಾಡಿಗೆ ಮರಳುವುದನ್ನು ಎದುರು ನೋಡುತ್ತಿರುವುದಾಗಿ ಹೇಳಿದರು.

“ನಾವು ಪರಸ್ಪರರ ಸಂಸ್ಕೃತಿಯನ್ನು ಪ್ರಶಂಸಿಸಲು ನೋಡುತ್ತಿರುವಾಗ, ಸಾಂಸ್ಕೃತಿಕ ವಿನಿಮಯವು ಕಾನೂನುಬದ್ಧ, ಪಾರದರ್ಶಕ ಮತ್ತು ನಿಯಮಾಧಾರಿತವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಇಂದು ಮುಖ್ಯವಾಗಿದೆ” ಎಂದು ಜೈಶಂಕರ್ ಹೇಳಿದರು.

ಲೋಕಾರಿ ದೇವಸ್ಥಾನವು 20 ಯೋಗಿನಿ ಪ್ರತಿಮೆಗಳನ್ನು ಹೊಂದಿದೆ ಎಂದು ನಂಬಲಾಗಿದೆ. ಇದನ್ನು ಪ್ರಾಣಿಗಳ ತಲೆಗಳನ್ನು ಹೊಂದಿರುವ ಸುಂದರ ಮಹಿಳೆಯರಂತೆ ಚಿತ್ರಿಸಲಾಗಿದೆ.

Related Articles

Latest Articles