ಮಧ್ಯಪ್ರದೇಶದ ಶಾಹದೋಲ್‌ನಲ್ಲಿ 17 ವರ್ಷದ ಯುವಕನೊಬ್ಬ ಉದ್ಯಮಿಯೊಬ್ಬರ ಮಗನನ್ನು ಅಪಹರಿಸಿ 25 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟ ಘಟನೆ ನಡೆದಿದೆ. ತನ್ನ ಗೆಳತಿಯನ್ನು ಮದುವೆಯಾಗಲು ಕಾರು ಮತ್ತು ದೊಡ್ಡ ಮನೆಯನ್ನು ಖರೀದಿಸಲು ಅಪರಾಧ ಎಸಗಿದ್ದಾನೆ ಎಂದು ವರದಿಯಾಗಿದೆ.
ಶಹದೋಲ್‌ನ ಬುಧಾರ್ ಪಟ್ಟಣದ ಉದ್ಯಮಿಯ ಫೋನ್‌ಗೆ ವಾಟ್ಸಾಪ್ ಸಂದೇಶದ ಮೂಲಕ ಬೆದರಿಕೆ ಹಾಕಿದ್ದಾನೆ.
ಗಾಬರಿಗೊಂಡ ಹಿನ್ನೆಲೆಯಲ್ಲಿ ಉದ್ಯಮಿ ಹಾಗೂ ಆತನ ಸಹೋದರ ಪೊಲೀಸ್ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಪೊಲೀಸರು ತನಿಖೆಗೊಳಿಸಿದಾಗ ಮೊಬೈಲ್ ಫೋನ್ ಸಂಖ್ಯೆ ಆಧಾರದ ಮೇಲೆ 17 ವರ್ಷದ ಬಾಲಕನನ್ನು ಬಂಧಿಸಿದ್ದಾರೆ. ಆತನನ್ನು ವಿಚಾರಣೆಗೊಳಪಡಿಸಿದ ಆರೋಪಿಗೆ ಗೆಳತಿಯೊಬ್ಬಳಿದ್ದು, ಆಕೆಯನ್ನು ಮದುವೆಯಾಗಲು ಬಯಸಿರುವುದು ಪೊಲೀಸರಿಗೆ ತಿಳಿದಿದೆ. ಆದರೆ, ಆತನ ಬಳಿ ಕಾರು, ಮನೆ ಇರಲಿಲ್ಲ. ಇದಕ್ಕಾಗಿಯೇ ಸುಲಿಗೆ ಹಣವನ್ನು ಪಡೆಯಲು ಅಪಹರಿಸಿದ್ದಾಗಿ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ.
ಈ ಅಪರಾಧ ಎಸಗುವ ಮುಂಚೆ ಗೂಗಲ್‌ನಲ್ಲಿ ಅಪಹರಣದ ಚಲನಚಿತ್ರ, ಸಿರೀಸ್‌ಗಳನ್ನು ವೀಕ್ಷಿಸಿದ್ದಾಗಿ ತಿಳಿದುಬಂದಿದೆ.
- ಮುತ್ತಪ್ಪ ರೈ ಪುತ್ರನ ಮೇಲೆ ಫೈರಿಂಗ್: ಎರಡು ದಿನಗಳ ಹಿಂದೆ ರಷ್ಯಾದಿಂದ ಬಂದಿದ್ದ ರಿಕ್ಕಿ ರೈ
- ಬೆಳ್ತಂಗಡಿ: ಪುರುಷ ಕಟ್ಟುನ ಆಚರಣೆಯಲ್ಲಿ ಮುಸ್ಲಿಮರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ದೂರು
- ಹನ್ನೊಂದು ನಿಮಿಷಗಳ ಬಾಹ್ಯಾಕಾಶ ಪ್ರವಾಸ ಮುಗಿಸಿ ಭೂಮಿಗೆ ಮರಳಿದ ಮಹಿಳಾ ತಂಡ
- ಉಳ್ಳಾಲ: ಸಾಮೂಹಿಕ ಅತ್ಯಾಚಾರ ಪ್ರಕರಣ – ಮೂವರ ಬಂಧನ
- ನೀರಜ್ ಚೋಪ್ರಾ ಮತ್ತೆ ಪರಾಕ್ರಮ – ಭರ್ಜರಿ ಚಿನ್ನದ ಬೇಟೆ..! ತನ್ನದೇ ದಾಖಲೆ ಮುರಿದ ಬಂಗಾರದ ಯುವಕ