ಪಹಲ್ಗಾಮ್ ದಾಳಿ ಮೂಲಕ ಪಾಕಿಸ್ತಾನ ಕೆಟ್ಟ ಪರಿಸ್ಥಿತಿಯನ್ನ ಮೈಮೇಲೆ ಎಳೆದುಕೊಂಡಿದೆ. ಉಗ್ರರ ಭೇಟೆಗೆ ಭಾರತ ಪಣ ತೊಟ್ಟಿದೆ. ಭಾರತದ ದಿಟ್ಟ ನಿರ್ಧಾರಗಳು ಮಾಸ್ಟರ್ ಸ್ಟ್ರೋಕ್ ಕೊಟ್ಟಿವೆ. ಬುಧವಾರ ನಡೆದ ‘ಆಪರೇಷನ್ ಸಿಂಧೂರ’ ಜೀವನಪೂರ್ತಿ ಮರೆಯಲಾಗದಷ್ಟು ಪೆಟ್ಟು ನೀಡಿದೆ. ಆ ಮೂಲಕ ಉಗ್ರರಿಗೆ ನರಕ ದರ್ಶನ ತೋರಿಸಿದೆ ಭಾರತೀಯ ಸೇನೆ.
ಇದೀಗ ಭಾರತ ಮಾತ್ರವಲ್ಲ, ಬಲೂಚಿಸ್ತಾನ ಕೂಡ ದೊಡ್ಡ ಆಘಾತ ನೀಡಿದೆ. ಬಿಎಲ್‌ಎ (Baloch Liberation Army) ಪಡೆ ಪಾಕಿಸ್ತಾನಿ ಸೇನಾ ವಾಹನದ ಮೇಲೆ ದಾಳಿ ನಡೆಸಿ 12 ಸೈನಿಕರನ್ನ ಹತ್ಯೆ ಮಾಡಿದೆ.
ಪಾಕಿಸ್ತಾನದ ನೈಋತ್ಯ ಪ್ರಾಂತ್ಯದ ಬಲೂಚಿಸ್ತಾನದ ಕಚ್ಚಿ ಜಿಲ್ಲೆಯ ಮಾಚ್ ಪ್ರದೇಶದಲ್ಲಿ ಐಇಡಿ ದಾಳಿ ಆಗಿದೆ. ಬಲೂಚ್ ಲಿಬರೇಶನ್ ಆರ್ಮಿಯ ವಿಶೇಷ ಕಾರ್ಯಾಚರಣೆ ಸ್ಕ್ವಾಡ್ (STOS) ಭೀಕರ ದಾಳಿ ಮಾಡಿದೆ. ರಿಮೋಟ್ ಕಂಟ್ರೋಲ್ಡ್ ಐಇಡಿಯೊಂದಿಗೆ ಬೃಹತ್ ಸ್ಫೋಟ ನಡೆಸಿದೆ. ಪಾಕ್ ಸೈನಿಕರು ಮಿಲಿಟರಿ ಕಾರ್ಯಾಚರಣೆಗೆ ಹೋಗುತ್ತಿದ್ದಾಗ ದಾಳಿ ಆಗಿದೆ.
ಕಳೆದ ಮಂಗಳವಾರ ದಾಳಿ ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಬಲೂಚ್ ಲಿಬರೇಷನ್ ಆರ್ಮಿಯ ಸದಸ್ಯರ ಪ್ಲಾನ್ ಮಾಡುತ್ತಿರೋದು ನಂತರ ವಾಹನ ಸ್ಫೋಟಗೊಳ್ಳುವ ದೃಶ್ಯ ಇದೆ. ಬ್ಲಾಸ್ಟ್ ಆದ ಹೊಡೆತಕ್ಕೆ ಪಾಕ್ ಸೈನಿಕರು ಛಿದ್ರ ಛಿದ್ರವಾಗಿ ನೆಲಕ್ಕೆ ಬಿದ್ದಿದ್ದಾರೆ