
ಇತ್ತೀಚಿಗೆ ಲಂಡನ್‌ನಲ್ಲಿ ನಡೆದ ಹರಾಜಿನಲ್ಲಿ 100 ರೂ. ಮುಖಬೆಲೆಯ ಭಾರತೀಯ ಕರೆನ್ಸಿ ನೋಟು ಬರೋಬ್ಬರಿ 56,49,650 ರೂ. ಗಳಿಗೆ ಮಾರಾಟವಾಗಿದೆ.
ಇದನ್ನು ‘ಹಜ್ ನೋಟು’ ಎಂದು ಕರೆಯಲಾಗುತ್ತದೆ. 20 ನೇ ಶತಮಾನದ ಮಧ್ಯದಲ್ಲಿ, ಅಂದ್ರೆ 1950 ರ ದಶಕದಲ್ಲಿ ಹಜ್ ಯಾತ್ರೆಗಾಗಿ ಗಲ್ಫ್ ದೇಶಗಳಿಗೆ ಪ್ರಯಾಣಿಸುತ್ತಿದ್ದ ಭಾರತೀಯ ಯಾತ್ರಾರ್ಥಿಗಳಿಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಈ ವಿಶೇಷ ಕರೆನ್ಸಿ ನೋಟನ್ನು ಬಿಡುಗಡೆ ಮಾಡಿತ್ತು. ಅಕ್ರಮ ಚಿನ್ನ ಖರೀದಿಯನ್ನು ತಡೆಯುವ ಉದ್ದೇಶದಿಂದ ಈ ಹಜ್ ನೋಟನ್ನು ಬಿಡುಗಡೆ ಮಾಡಲಾಗಿತ್ತು.
ಈ ನೋಟುಗಳು ಸಾಮಾನ್ಯ ಭಾರತೀಯ ನೋಟುಗಳಿಗಿಂತ ವಿಭಿನ್ನ ಬಣ್ಣದ್ದಾಗಿದ್ದವು. ಈ ನೋಟುಗಳು ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಬಹ್ರೇನ್, ಕುವೈತ್ ಮತ್ತು ಓಮನ್‌ನಂತಹ ಕೆಲವು ಗಲ್ಫ್ ರಾಷ್ಟ್ರಗಳಲ್ಲಿ ಈ ನೋಟು ಕಾನೂನುಬದ್ಧ ಟೆಂಡರ್ ಆಗಿದ್ದರೂ, ಈ ನೋಟುಗಳು ಭಾರತದಲ್ಲಿ ಮಾನ್ಯವಾಗಿರಲಿಲ್ಲ.
1970 ರಲ್ಲಿ ಆರ್‌ಬಿಐ ಈ ಹಜ್ ನೋಟುಗಳ ಮುದ್ರಣವನ್ನು ಸಂಪೂರ್ಣವಾಗಿ ನಿಲ್ಲಿಸಿತು. ಈ ವಿಶೇಷ ನೋಟು ಇದೀಗ ಭಾರೀ ಬೆಲೆಗೆ ಹರಾಜು ಪ್ರಕ್ರಿಯೆಯಲ್ಲಿ ಮಾರಾಟವಾಗಿದೆ.